Sunday, July 26, 2026
spot_imgspot_img
spot_imgspot_img

ಉಡುಪಿ: ನಾಪತ್ತೆಯಾಗಿದ್ದ ಸಂಸ್ಕೃತ ಉಪನ್ಯಾಸಕರ ಮೃತದೇಹ ಬಾವಿಯಲ್ಲಿ ಪತ್ತೆ!

- Advertisement -
- Advertisement -

ಉಡುಪಿ: ನಾಪತ್ತೆಯಾಗಿದ್ದ ಉಪನ್ಯಾಸಕರೊಬ್ಬರ ಮೃತದೇಹವು ಮನೆ ವಠಾರದಲ್ಲಿದ್ದ ಬಾವಿಯಲ್ಲಿ ಇಂದು(ಎ.25) ಪತ್ತೆಯಾಗಿದ್ದು, ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಮೃತರನ್ನು ಉಡುಪಿ ಸಂಸ್ಕೃತ ಕಾಲೇಜಿನ ಉಪನ್ಯಾಸಕ, ಶಿರಸಿ ಮೂಲದ ಗಣಪತಿ ಭಟ್(55) ಎಂದು ಗುರುತಿಸಲಾಗಿದೆ. ಅವಿವಾಹಿತರಾಗಿದ್ದ ಇವರು, ಎಂ.ಜಿ.ಎಂ ಕಾಲೇಜಿನ ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.ಇವರು ನಾಪತ್ತೆಯಾದ ಬಗ್ಗೆ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಅಗ್ನಿ ಶಾಮಕ ದಳದ ನೆರವಿನಿಂದ ಮೃತದೇಹವನ್ನು ಮೇಲಕೆತ್ತಾಲಾಯಿತು. ವೈಯಕ್ತಿಕ ಕಾರಣದಿಂದ ಮನನೊಂದು ಇವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಶಂಕಿಸಲಾಗಿದ್ದು, ಸ್ಥಳಕ್ಕೆ ಉಡುಪಿ ನಗರ ಪೊಲೀಸ್‌ ಠಾಣೆಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ ಎಂಬುದಾಗಿ ವರದಿ ಮೂಲಕ ತಿಳಿದುಬಂದಿದೆ.

- Advertisement -

Related news

error: Content is protected !!