- Advertisement -
- Advertisement -

ಪುತ್ತೂರು: ತಾಲೂಕಿನ ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಹನುಮಾನ್ ಮಂದಿರ ಸಾಂತ್ವನ ಸೇವಾ ಟ್ರಸ್ಟ್ (ರಿ.) ವತಿಯಿಂದ ಅನಾಥ ಹಾಗೂ ಸಿಂಗಲ್ ಪೇರೆಂಟ್ ಗಂಡು ಮಕ್ಕಳಿಗಾಗಿ ಮಹತ್ವದ ಸೇವಾ ಕಾರ್ಯಕ್ರಮ ಘೋಷಿಸಲಾಗಿದೆ.ಟ್ರಸ್ಟ್ ವತಿಯಿಂದ ಗುರುಕುಲ ಮಾದರಿಯಲ್ಲಿ ಮಕ್ಕಳಿಗೆ ಉಚಿತ ಊಟ, ವಸತಿ ಹಾಗೂ ಶಾಲಾ ಶಿಕ್ಷಣದ ಸಂಪೂರ್ಣ ಖರ್ಚನ್ನು ಭರಿಸುವ ಯೋಜನೆ ಜಾರಿಗೊಳ್ಳಲಿದೆ.




6, 7 ಮತ್ತು 8ನೇ ತರಗತಿ ವಿದ್ಯಾರ್ಥಿಗಳನ್ನು ಕೃಷ್ಣನಗರ ಶಾಲೆಗೆ, 9, 10 ಹಾಗೂ 11ನೇ ತರಗತಿ ವಿದ್ಯಾರ್ಥಿಗಳನ್ನು ಕೊಂಬೆಟ್ಟು ಶಾಲೆಗೆ ದಾಖಲಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.ಈ ಸೇವೆಯನ್ನು ಅಗತ್ಯವಿರುವ ಮಕ್ಕಳು ಹಾಗೂ ಪೋಷಕರು ಸದುಪಯೋಗಪಡಿಸಿಕೊಳ್ಳುವಂತೆ ಟ್ರಸ್ಟ್ ಮನವಿ ಮಾಡಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ : 8762665613
- Advertisement -








