Thursday, July 23, 2026
spot_imgspot_img
spot_imgspot_img

ರಾಯಚೂರು: ಬ್ರೋಕರ್ ಹೆಸರಲ್ಲಿ ವಂಚನೆ – ಹೆಣ್ಣು ನೋಡಲು ಬಂದವರ ಬೈಕ್, ಹಣ ಕಳ್ಳತನ

- Advertisement -
- Advertisement -

ರಾಯಚೂರು: ಮದುವೆ ಬ್ರೋಕರ್ ಹೆಸರಲ್ಲಿ ಹೆಣ್ಣು ತೊರಿಸುವುದಾಗಿ ಕರೆದು ಬೆದರಿಸಿ ಬೈಕ್ ಕಸಿದುಕೊಂಡು ಪರಾರಿಯಾಗುತ್ತಿದ್ದ ಆರೋಪಿ ಕೊನೆಗೂ ರಾಯಚೂರಿನ ಕವಿತಾಳ ಪೊಲೀಸರ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿದ್ದು, ಆರೋಪಿಯನ್ನು ದೊಡ್ಡಬಸವ ಎಂದು ಗುರುತಿಸಲಾಗಿದೆ.

ಹೆಣ್ಣು ನೋಡಲು ಬೈಕ್‌ನಲ್ಲಿ ಬರುವವರಿಗೆ ಬೆದರಿಸಿ ಹಣ, ಬೈಕ್ ಕಸಿದುಕೊಳ್ಳುತ್ತಿದ್ದನು. ಮಸ್ಕಿ ತಾಲೂಕಿನ ಬಳಗಾನೂರು ಗ್ರಾಮದ ಆರೋಪಿ ದೊಡ್ಡಬಸವನನ್ನು ಬಂಧಿಸಿರುವ ಪೊಲೀಸರು ಆರೋಪಿಯಿಂದ 8.40 ಲಕ್ಷ ರೂ. ಮೌಲ್ಯದ 14 ಬೈಕ್ ಗಳು ಜಪ್ತಿ ಮಾಡಿದ್ದಾರೆ.

ಬಳ್ಳಾರಿ, ಸಿರಗುಪ್ಪ, ಗಂಗಾವತಿ, ಮಾನ್ವಿ, ಬಳಗಾನೂರು ಸೇರಿ ಹಲವೆಡೆ ಕೃತ್ಯ ಎಸಗಿರುವ ಆರೋಪಿ ಮದುವೆಗೆ ಹೆಣ್ಣು ತೋರಿಸುವುದಾಗಿ ನಂಬಿಸಿ ಕರೆದು ಬೈಕ್, ಹಣ ವಸೂಲಿ ಮಾಡಿ ಪರಾರಿಯಾಗುತ್ತಿದ್ದು, ಕೊಪ್ಪಳ ಜಿಲ್ಲೆಯ ಶರಣಪ್ಪ ಎಂಬುವವರ ದೂರಿನ ಮೇರೆಗೆ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.

ಕೊಪ್ಪಳ ಜಿಲ್ಲೆಯಿಂದ ‌ಸ್ನೇಹಿತ ಈಶಪ್ಪ ಜೊತೆಗೆ ‌ಕನ್ಯಾ ನೋಡಲು ಬಂದಿದ್ದ ಶರಣಪ್ಪ‌ನಿಗೆ ಚಾಕು ತೋರಿಸಿ ಬೈಕ್ ಕಿತ್ತುಕೊಂಡು ದೊಡ್ಡ ಬಸವ ಪರಾರಿಯಾಗಿದ್ದ. ಆತನ ಸಂಪೂರ್ಣ ಮಾಹಿತಿ ಕಲೆಹಾಕಿ ದಾಳಿ ಮಾಡಿದ ಕವಿತಾಳ ಪೊಲೀಸರು ದೊಡ್ಡ ಬಸವನನನ್ನ ಬಂಧಿಸಿದ್ದಾರೆ. ಆರೋಪಿಯ ಬಳಗಾನೂರು ಮನೆ ಮೇಲೆ ದಾಳಿ ಮಾಡಿದಾಗ ಗಿರಿವಿ ಇಡಲು ಸಂಗ್ರಹಿಸಿದ್ದ 14 ಬೈಕ್ ಗಳನ್ನ ‌ಜಪ್ತಿ ಮಾಡಲಾಗಿದೆ. ವಿಚಾರಣೆ ಬಳಿಕ ಆರೋಪಿಯನ್ನ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ವರದಿ ಮೂಲಕ ತಿಳಿದುಬಂದಿದೆ.

- Advertisement -

Related news

error: Content is protected !!