



ಬೆಂಗಳೂರು: ಪೂಜೆ ನೆಪದಲ್ಲಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಕಾಮುಕ ಸ್ವಾಮೀಜಿಯ ಮುಖವಾಡವನ್ನ ಸಂತ್ರಸ್ತ ಮಹಿಳೆಯೊಬ್ಬರು ಕಳಚಿರುವ ಘಟನೆ ಘಟನೆ ಚೆನ್ನಮಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಜ್ಯೋತಿಷ್ಯ ಹಾಗೂ ಸಂಖ್ಯಾಶಾಸ್ತ್ರದ ಹೆಸರಲ್ಲಿ ಮಹಿಳೆಯರ ಜೊತೆ ಆಡವಾಡ್ತಿದ್ದ ನಕಲಿ ಸ್ವಾಮಿ ಮೇಲೆ ಎಫ್‌ಐಆರ್ ದಾಖಲಾಗಿದೆ.
ಬೆಂಗಳೂರಲ್ಲಿ ಇತ್ತೀಚೆಗೆ ಕಾಮುಕ ಜ್ಯೋತಿಷಿ ಸ್ವಾಮೀಜಿಗಳದ್ದೆ ದರ್ಬಾರಾಗಿದೆ. ಅದೇ ರೀತಿ ಈ ಸ್ವಾಮೀಜಿಯ ವಿಡಿಯೋ ನೋಡಿದರೆ ನಿಮ್ಮ ಭಕ್ತಿ ಭಾವ ಬದಲಾಗುತ್ತೆ. ಫ್ಯಾಮಿಲಿ ಹೆಣ್ಣುಮಕ್ಕಳೇ ಇವನ ಟಾರ್ಗೆಟ್. ವ್ಯಾಪಾರ ಅಭಿವೃದ್ಧಿ ಮಾಡೋ ನೆಪದಲ್ಲಿ ಆ ಪೂಜೆ ಈ ಪೂಜೆ ಮಾಡಬೇಕು ಅಂತ ಹೇಳಿ ಮಹಿಳೆಯ ಮೇಲೆ ಅನೇಕ ಬಾರಿ ಲೈಂಗಿಕ ಕಿರುಕುಳ ಕೊಡುತ್ತಿದ್ದನಂತೆ ಈ ಸ್ವಾಮಿ.
ಸಂತ್ರಸ್ತ ಮಹಿಳೆಯ ಕುಟುಂಬಕ್ಕೆ ಪರಿಚಯವಾದ ಮೋಹನ್ ಕುಮಾರ್ ಜೆ ಎಂಬ ಜ್ಯೋತಿಷಿ ನಿಮ್ಮ ಕುಟುಂಬಕ್ಕೆ ತುಂಬಾ ತೊಂದರೆ ಇದೆ. ನಿಮ್ಮ ವ್ಯಾಪಾರ ಕಷ್ಟದಲ್ಲಿದೆ ನಿಮ್ಮ ಕಷ್ಟಗಳಿಗೆ ಪರಿಹಾರ ಮಾಡಿಕೊಡುತ್ತೇನೆ. ನಿಮ್ಮ ಸಂಸಾರಕ್ಕೆ ನಾನು ಸಹಾಯ ಮಾಡುತ್ತೇನೆ, ದೀಕ್ಷೆ ಕೊಡುತ್ತೇನೆ ಎಂದು ಪುಸಲಾಯಿಸಿ ಲಕ್ಷಾಂತರ ಹಣ ಪೀಕಿದ್ದಾನೆ. ಅಷ್ಟೇ ಅಲ್ಲದೇ ಆ ಕುಟುಂಬದ ಗೃಹಿಣಿಯ ಮೇಲೆ ಲೈಂಗಿಕ ದೌರ್ಜನ್ಯ ಕೂಡ ನಡೆಸಿದ್ದಾನೆ.
ಪೂಜೆ, ದೀಕ್ಷೆ, ಹೋಮ ಎಂದು ನಂಬಿಸಿ ಸಿಕ್ಕ ಹೆಣ್ಣುಮಕ್ಕಳ ತಲೆ ಕೆಡಿಸಿ ಅವರ ಮಂಚಕ್ಕೆ ಕರೀತಾನಂತೆ ಈ ಮೋಹನ್ ಕುಮಾರ್. ಒಂದು ವೇಳೆ ಅವನ ಇಚ್ಚೆಗೆ ಒಪ್ಪದಿದ್ದರೆ ನಿನ್ನ ಗಂಡ ಮಕ್ಕಳನ್ನ ವಾಮಾಚಾರ ಮಾಡಿ ಸಾಯೋಸೋದಾಗಿ ಬೆದರಿಕೆ ಹಾಕುತ್ತಾನಂತೆ. ಸಂತ್ರಸ್ತ ಮಹಿಳೆ ಕೊನೆಗೂ ಧೈರ್ಯ ಮಾಡಿ ಚೆನ್ನಮಕೆರೆ ಅಚ್ಚುಕಟ್ಟು ಪೊಲೀಸ್ ಸ್ಟೇಷನ್ ಗೆ ದೂರು ನೀಡಿದ್ದಾರೆ. ದೂರನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಚುರುಕು ಗೊಳಿಸಿದ್ದು, ಫೋನ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿರುವ ಸ್ವಾಮೀಜಿ ಮೊಹನ್ ಕುಮಾರ್ ಗಾಗಿ ಹುಡುಕಾಟ ನಡೆಸ್ತಿದ್ದಾರೆ ಎಂದು ವರದಿ ಮೂಲಕ ತಿಳಿದು ಬಂದಿದೆ.








