Friday, July 24, 2026
spot_imgspot_img
spot_imgspot_img

ಜಿಮ್ ವಾಟ್ಸಪ್ ಗ್ರೂಪ್‌ನಲ್ಲಿ ಕಿರಿಕ್ – ನಡುರಸ್ತೆಯಲ್ಲೇ ಹೊಡೆದಾಡಿಕೊಂಡ ಬಾಡಿ ಬಿಲ್ಡರ್ಸ್

- Advertisement -
- Advertisement -

ಬೆಂಗಳೂರು: ಜಿಮ್ ವಾಟ್ಸಾಪ್ ಗ್ರೂಪ್‌ನಲ್ಲಿ ಕಿರಿಕ್ ಆಗಿದ್ದ ಹಿನ್ನೆಲೆ ಯುವಕನ ಮೇಲೆ ಮನಬಂದಂತೆ ಹಲ್ಲೆ ಮಾಡಲಾಗಿದೆ. ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಟೀಚರ್ಸ್ ಕಾಲೊನಿಯಲ್ಲಿ ಈ ಘಟನೆ ನಡೆದಿದೆ.

ಟ್ರೈನರ್ ಬಗ್ಗೆ ಮಾತಾಡ್ತೀಯಾ ಎಂದು ರೊಚ್ಚಿಗೆದ್ದು ಅನ್ಶ್ ಠಾಕೂರ್ ಎಂಬಾತನ ಮೇಲೆ ಮತಿನ್ ಮತ್ತು ಗ್ಯಾಂಗ್ ಹಿಗ್ಗಾಮುಗ್ಗ ಹಲ್ಲೆ ಮಾಡಿದ್ದಾರೆ. ಹಲ್ಲೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಪದವಿ ಓದುತ್ತಾ ಪಾರ್ಟ್ ಟೈಂ ಜಿಮ್ ಟ್ರೈನರ್ ಆಗಿರುವ ಅನ್ಶ್ ಠಾಕೂರ್ ಈ ಹಿಂದೆ ಇಲಿಯಾಜ್ ಎಂಬಾತನಿಂದ ಖಾಸಗಿ ಜಿಮ್‌ನಲ್ಲಿ ಟ್ರೈನಿಂಗ್ ಪಡೆದಿದ್ದ. ಕಳೆದ ಆರು ತಿಂಗಳಿಂದ ಇಲಿಯಾಜ್ ಮತ್ತು ಅನ್ಶ್ ನಡುವೆ ಸಂಪರ್ಕವಿರಲಿಲ್ಲ. ಮೇ 18ರ ರಾತ್ರಿ ಜಿಮ್‌ನ ವಾಟ್ಸಪ್ ಗ್ರೂಪ್‌ನಲ್ಲಿ ಕೆಲ ಮಾತುಕತೆಗಳು ನಡೆದಿದೆ. ಇಲಿಯಾಜ್ ಮತ್ತು ಅನ್ಶ್ ನಡುವೆ ಬಾಡಿ ಬಿಲ್ಡಿಂಗ್ ಸಂಬಂಧಿಸಿ ಗಲಾಟೆ ಆಗಿದೆ. ಈ ವೇಳೆ ಟ್ರೈನರ್ ಬಗ್ಗೆಯೇ ಮಾತನಾಡ್ತೀಯಾ ಎಂದು ಮತಿನ್ & ಗ್ಯಾಂಗ್ ಮಾತನಾಡುವ ನೆಪದಲ್ಲಿ ಮನೆ ಬಳಿ ಬಂದು ರಕ್ತ ಬರುವಂತೆ ಹಲ್ಲೆ ಮಾಡಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ 6 ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ವರದಿ ಮೂಲಕ ತಿಳಿದು ಬಂದಿದೆ

- Advertisement -

Related news

error: Content is protected !!