- Advertisement -
- Advertisement -




ಕುಂಡಡ್ಕ ಶ್ರೀ ಮೂವರ್ ದೈವಂಗಳು, ಮಲರಾಯ, ದುಗ್ಗಲಾಯ ಮತ್ತು ಧೂಮಾವತಿ ಹಾಗೂ ಪರಿವಾರ ದೈವಗಳ ನೇಮೋತ್ಸವವು
ಕುಂಡಡ್ಕ ಮಾಗಣೆಯಲ್ಲಿ ಮೇ 23, 24 ಮತ್ತು 26 ರಂದು ನಡೆಯಲಿದೆ.
ಮೇ 23 ಶನಿವಾರದಂದು ರಾತ್ರಿ ಗಂಟೆ 7 ಕ್ಕೆ ಭಂಡಾರ ಬರುವುದು, ಡೆಚ್ಚಾರಿನಿಂದ ಮಲರಾಯ ದೈವದ ಭಂಡಾರ ಮತ್ತು ಜೈನರಕೋಡಿಯಿಂದ ಮೂವರ್ ದೈವಂಗಳ ಭಂಡಾರ ಬರುವುದು. ರಾತ್ರಿ ಗಂಟೆ 9 ಕ್ಕೆ ಅನ್ನಸಂತರ್ಪಣೆ , ರಾತ್ರಿ ಗಂಟೆ 10ಕ್ಕೆ ಅಯ್ಯನ ಬಂಟರ ಮತ್ತು ಮೂವರ್ ದೈವಂಗಳ ನೇಮೋತ್ಸವ.
ಮೇ 24 ಭಾನುವಾರದಂದು ಬೆಳಗ್ಗೆ ಗಂಟೆ 10ಕ್ಕೆ ಶ್ರೀ ಮಲರಾಯ ದೈವಗಳ ನೇಮೋತ್ಸವ, ಮಧ್ಯಾಹ್ನ ಗಂಟೆ 1.30ಕ್ಕೆ ಅನ್ನಸಂತರ್ಪಣೆ, ರಾತ್ರಿ ಗಂಟೆ 8.30ಕ್ಕೆ ಅನ್ನಸಂತರ್ಪಣೆ,ರಾತ್ರಿ ಗಂಟೆ 9.30ಕ್ಕೆ ದುಗ್ಗಲಾಯ ಧರ್ಮದೈವ ಮತ್ತು ಮಲರಾಯ ನೇಮೋತ್ಸವ.
ಮೇ 26 ಮಂಗಳವಾರದಂದು ಸಂಜೆ ಗಂಟೆ 4 ಕ್ಕೆ ಉಜಿರೆಮಾರು ಭಂಡಾರ ಮನೆಯಿಂದ ಭಂಡಾರ ಬರುವುದು, ರಾತ್ರಿ ಗಂಟೆ 9 ಕ್ಕೆ ಅನ್ನಸಂತರ್ಪಣೆ, ರಾತ್ರಿ ಗಂಟೆ 10 ಕ್ಕೆ ಧೂಮಾವತಿ ಹಾಗೂ ಪರಿವಾರ ದೈವಗಳ ನೇಮೋತ್ಸವ ನಡೆಯಲಿದೆ.
- Advertisement -








