Thursday, July 23, 2026
spot_imgspot_img
spot_imgspot_img

ಮೃತ ಮಹಿಳೆಯರ ಬೆತ್ತಲೆ ಫೋಟೋ ತೆಗೆದು ವಿಕೃತಿ ಮೆರೆದ ಬ್ರಿಮ್ಸ್ ಆಸ್ಪತ್ರೆಯ ಸಿಬ್ಬಂದಿ: ಆರೋಪಿಯ ಬಂಧನ

- Advertisement -
- Advertisement -

ಬೀದ‌ರ್ : ಬ್ರಿಮ್ಸ್ ಆಸ್ಪತ್ರೆಯ ಸಿಬ್ಬಂದಿಯಿಂದಲೇಮೃತ ಮಹಿಳೆಯರ ಬೆತ್ತಲೆ ಫೋಟೋ ತೆಗೆದು ವಿಕೃತಿ ಮೆರೆದ ಆರೋಪ ಕೇಳಿ ಬಂದಿದ್ದು, ಆರೋಪಿಯನ್ನು ಬಂಧಿಸಿ ನೋಟೀಸ್ ನೀಡುವ ಮೂಲಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಶವಾಗಾರ ಕೋಣೆಯ ಅಟೆಂಡರ್ ಮುನೀರ್ ಅಹ್ಮದ್ ಆರೋಪಿ.ಶವಾಗಾರ ಇಲಾಖೆಯ ಮುಖ್ಯಸ್ಥ ಡಾ.ಮೋಸಿನ್ ಉಲ್ ಹಕ್ ಅವರು ದೂರು ನೀಡಿದ್ದು, ಪಿಎಂಇ ಮಾಡುವ ಕಾಲಕ್ಕೆ ಅನುಮತಿ ಇಲ್ಲದೇ ಮುನೀರ್ ಅಹ್ಮದ್ ತನ್ನ ಮೊಬೈಲ್‌ನಲ್ಲಿ ಮೃತ ಮಹಿಳೆಯರ ಬೆತ್ತಲೆ ಪೋಟೋ ಕ್ಲಿಕ್ಕಿಸಿ ಸಂಗ್ರಹಿಸಿಟ್ಟುಕೊಳ್ಳುತ್ತಿದ್ದ ಎಂದು ದೂರಿದ್ದಾರೆ.

ಮುನೀರ್ ಅಹ್ಮದ್ ಮೃತ ಮಹಿಳೆಯರ ಮೃತದೇಹದ ಮೇಲಿನ ಬಟ್ಟೆ ತೆಗೆದು ಪೋಟೋ ತೆಗೆದಿಟ್ಟುಕೊಳ್ಳುತ್ತಿದ್ದನು. ಈತನ ಹೀನ ಕೃತ್ಯದಿಂದ ಮಹಿಳೆಯರ ಘನತೆ, ಮೃತ ಕುಟುಂಬಸ್ಥರ ಗೌರವ ಹಾಗೂ ವೈದ್ಯಕೀಯ ಗೌಪ್ಯತೆ ಮತ್ತು ಗೌರವಕ್ಕೆ ಧಕ್ಕೆ ಉಂಟಾಗಿರುತ್ತದೆ. ಆದ್ದರಿಂದ ಆರೋಪಿ ಮುನೀರ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.

ಈ ಘಟನೆ ವಿರುದ್ಧ ನ್ಯೂಟೌನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿ, ನೋಟೀಸ್ ನೀಡುವ ಮೂಲಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಆರೋಪಿಯ ಮೊಬೈಲ್ ಅನ್ನು ಫಾರೆನ್ಸಿಕ್ ತನಿಖೆಗಾಗಿ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!