Sunday, July 26, 2026
spot_imgspot_img
spot_imgspot_img

ಬೆಂಗಳೂರು: ಮದ್ವೆಯಾಗಿ ಮೂರು ತಿಂಗಳಿಗೆ ತವರು ಸೇರಿದ ಪತ್ನಿ – ಅಳಿಯನಿಂದ ಅತ್ತೆ, ಮಾವನಿಗೆ ಮಚ್ಚೇಟು

- Advertisement -
- Advertisement -

ಬೆಂಗಳೂರು: ಮದುವೆಯಾಗಿ ಮೂರೇ ತಿಂಗಳಿಗೆ ಪತ್ನಿ ತವರು ಸೇರಿದ್ದಕ್ಕೆ ಕೋಪಗೊಂಡು ಅತ್ತೆ, ಮಾವನ ಮೇಲೆ ಅಳಿಯ ಮಚ್ಚಿನಿಂದ ದಾಳಿ ಮಾಡಿದ ಘಟನೆ ಕುಂಬಳಗೂಡು ಪೊಲೀಸ್ ಠಾಣಾ ವ್ಯಾಪ್ತಿಯ ಕಣ್ಮಿಣಿಕೆ ಅಪಾರ್ಟ್ಮೆಂಟ್‌ನಲ್ಲಿ ನಡೆದಿದೆ.

ಸೈಯದ್ ಅಹ್ಮದ್ (55) ಹಾಗೂ ನಸ್ರಿನಾ ಭಾನು (48) ಅಳಿಯನಿಂದ ಹಲ್ಲೆಗೊಳಗಾದವರು. ಅಳಿಯ ಫರ್ಹಾನ್ ಮುಬರಾಕ್ ಹಲ್ಲೆ ನಡೆಸಿದ ಆರೋಪಿ. ಮುಬಾರಕ್ 15ಕ್ಕೂ ಹೆಚ್ಚು ಬಾರಿ ಮಚ್ಚಿನಿಂದ ಹಲ್ಲೆ ಮಾಡಿದ್ದು, ಅತ್ತೆ ಹಾಗೂ ಮಾವನ ಕೈ, ಕಾಲು, ತಲೆ, ಭುಜ ಸೇರಿದಂತೆ ಹಲವೆಡೆ ಗಾಯಗಳಾಗಿವೆ. ಬಕ್ರೀದ್ ಹಬ್ಬದ ದಿನ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ದಾಳಿಯ ವಿಡಿಯೋ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಫರ್ಹಾನ್ ಮುಬಾರಕ್ ಐದು ವರ್ಷದ ಹಿಂದೆ ಸೈಯದ್ ಅಹ್ಮದ್ ಅವರ ಮಗಳ ಜೊತೆ ವಿವಾಹವಾಗಿದ್ದ. ಮದ್ವೆಯಾದ ಮೂರೇ ತಿಂಗಳಿಗೆ ಜೋಡಿ ಬೇರಾಗಿದ್ದರು. ನಾಲ್ಕು ತಿಂಗಳ ಹಿಂದೆ ಡಿವೋರ್ಸ್‌ಗೆ ಮಹಿಳೆ ಅರ್ಜಿ ಹಾಕಿದ್ದಳು. ಇದರಿಂದ ಸಿಟ್ಟಿಗೆದ್ದ ಪತಿ ಹೆಂಡತಿ ಮೇಲೆ ದಾಳಿ ಮಾಡಲು ಬಂದಿದ್ದ. ಆದರೆ ಆಕೆ ಮನೆಯಲ್ಲಿ ಇರಲಿಲ್ಲ. ಈ ವೇಳೆ ಅತ್ತೆ, ಮಾವನ ಮೇಲೆ ದಾಳಿ ಮಾಡಿದ್ದಾನೆ. ಈ ಸಂಬಂಧ ಕುಂಬಳಗೂಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!