Thursday, June 4, 2026
spot_imgspot_img
spot_imgspot_img

ಡಿಕೆಶಿ ಕ್ಯಾಬಿನೆಟ್‌ನಲ್ಲಿ ಪರಮೇಶ್ವರ್ ಏಕೈಕ ಡಿಸಿಎಂ – ಸಿದ್ದರಾಮಯ್ಯ ಪಟ್ಟಿಗೆ ಮಣಿದ ಹೈಕಮಾಂಡ್

- Advertisement -
- Advertisement -

ಬೆಂಗಳೂರು: ಇಂದು ಸಂಜೆ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಬೆನ್ನಲ್ಲೇ, ಹಿರಿಯ ದಲಿತ ನಾಯಕ, ತುಮಕೂರಿನ ಕೊರಟಗೆರೆ ಶಾಸಕ ಡಾ. ಜಿ. ಪರಮೇಶ್ವರ್ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡುವುದು ಈಗ ಬಹುತೇಕ ಖಚಿತವಾಗಿದೆ.

ಆರಂಭದಲ್ಲಿ ಕೇವಲ ಮುಖ್ಯಮಂತ್ರಿ ಹುದ್ದೆಯನ್ನಷ್ಟೇ ಸೃಷ್ಟಿಸಲು ಯೋಚಿಸಿದ್ದ ಕಾಂಗ್ರೆಸ್ ಹೈಕಮಾಂಡ್ ಸುದೀರ್ಘ ಚರ್ಚೆಗಳ ನಂತರ ಪಕ್ಷದ ಒಗ್ಗಟ್ಟು ಮತ್ತು ಪ್ರಮುಖ ಸಮುದಾಯಗಳ ಪ್ರಾತಿನಿಧ್ಯವನ್ನು ಬ್ಯಾಲೆನ್ಸ್ ಮಾಡಲು ಕೊನೆಗೂ ‘ಡಿಸಿಎಂ’ ಸೂತ್ರಕ್ಕೆ ಶರಣಾಗಿದೆ.

ಡಾ. ಜಿ. ಪರಮೇಶ್ವರ್ ಅವರಿಗೆ ಡಿಸಿಎಂ ಹುದ್ದೆ ಸಿಗುವಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪಾತ್ರ ಅತ್ಯಂತ ದೊಡ್ಡದಾಗಿದೆ. ಪರಮೇಶ್ವರ್ ಅವರು ಸತತ 8 ವರ್ಷಗಳ ಕಾಲ ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸಿದವರು. ರಾಜ್ಯದ ಅತ್ಯಂತ ಪ್ರಭಾವಿ ದಲಿತ ನಾಯಕರಾಗಿರುವ ಅವರಿಗೆ ಗೌರವಯುತ ಸ್ಥಾನ ಸಿಗಲೇಬೇಕು ಎಂದು ಸಿದ್ದರಾಮಯ್ಯ ಹೈಕಮಾಂಡ್ ಮುಂದೆ ಗಟ್ಟಿಯಾದ ಪಟ್ಟು ಹಿಡಿದಿದ್ದರು. ಸಿದ್ದರಾಮಯ್ಯ ಅವರ ಈ ಒತ್ತಡಕ್ಕೆ ಹೈಕಮಾಂಡ್ ಕೊನೆಗೂ ಗ್ರೀನ್ ಸಿಗ್ನಲ್ ನೀಡಿದೆ ಎನ್ನಲಾಗುತ್ತಿದೆ.

ಹೊಸ ಸಚಿವ ಸಂಪುಟದಲ್ಲಿ ಹಲವು ಪ್ರಭಾವಿ ನಾಯಕರು ಡಿಸಿಎಂ ಹುದ್ದೆಗಾಗಿ ತೀವ್ರ ಪೈಪೋಟಿ ನಡೆಸಿದ್ದರು ಮತ್ತು ತೆರೆಮರೆಯ ಕಸರತ್ತು ಜೋರಾಗಿತ್ತು. ಆದರೆ ರಾಜ್ಯದಲ್ಲಿ ಅಧಿಕಾರದ ಹಲವು ಕೇಂದ್ರಗಳು ಸೃಷ್ಟಿಯಾಗಬಾರದು ಎಂಬ ಕಾರಣಕ್ಕೆ ಅಂತಿಮವಾಗಿ ಡಾ. ಜಿ. ಪರಮೇಶ್ವರ್ ಅವರಿಗೆ ಮಾತ್ರ ಈ ಜವಾಬ್ದಾರಿ ನೀಡಲು ಹೈಕಮಾಂಡ್ ಸಮ್ಮತಿಸಿದೆ. ಆ ಮೂಲಕ ಡಿಕೆಶಿ ಕ್ಯಾಬಿನೆಟ್‌ನಲ್ಲಿ ಪರಮೇಶ್ವರ್ ಸೆಕೆಂಡ್ ಇನ್ ಕಮಾಂಡ್ ಆಗಿ ಹೊರಹೊಮ್ಮಲಿದ್ದಾರೆ.

ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಿರುವ ಹಿನ್ನೆಲೆಯಲ್ಲಿ ಸಿಎಂ ರೇಸ್‌ನಲ್ಲಿದ್ದ ಪರಮೇಶ್ವರ್ ಅವರಿಗೆ ಮುಖ್ಯಮಂತ್ರಿ ಹುದ್ದೆ ತಪ್ಪಿದ್ದಕ್ಕೆ ದಲಿತ ಸಮುದಾಯದಲ್ಲಿ ಸ್ವಲ್ಪ ಅಸಮಾಧಾನವಿತ್ತು. ಗೌರವಯುತ ಸ್ಥಾನವಾಗಿ ಅವರಿಗೆ ಕನಿಷ್ಠ ಡಿಸಿಎಂ ಸ್ಥಾನವನ್ನಾದರೂ ನೀಡಬೇಕು ಎಂದು ವಿವಿಧ ಮಠಾಧೀಶರು ಮತ್ತು ಅವರ ಬೃಹತ್ ಅಭಿಮಾನಿ ಬಳಗ ತೀವ್ರ ಒತ್ತಡ ಹೇರಿತ್ತು. ಈ ಜನಾಭಿಪ್ರಾಯಕ್ಕೆ ಕಾಂಗ್ರೆಸ್ ವರಿಷ್ಠರು ಮನ್ನಣೆ ನೀಡಿದ್ದಾರೆ.

- Advertisement -

Related news

error: Content is protected !!