Sunday, June 21, 2026
spot_imgspot_img
spot_imgspot_img

ಪಾರ್ಟ್‌ಟೈಮ್ ಕೆಲಸದ ಆಮಿಷ: ಹಣ ಪಡೆದು ವಂಚನೆ; ಪ್ರಕರಣ ದಾಖಲು

- Advertisement -
- Advertisement -

ಮಂಗಳೂರು, ಜೂ.19: ಪಾರ್ಟ್ ಟೈಮ್ ಕೆಲಸ ನೀಡುವುದಾಗಿ ನಂಬಿಸಿ 3.51 ಲಕ್ಷ ರೂ. ಖಾತೆಗೆ ಹಾಕಿಸಿ ಕೊಂಡು ಬಳಿಕ ಕೆಲಸ ನೀಡದೆ ವಂಚಿಸಿರುವ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.2025ರ ಆ.24ರಂದು ತನಗೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿತ್ತು. ಕರೆ ಮಾಡಿದ ವ್ಯಕ್ತಿ ತಾನು ಕ್ವಿಕ್ ಎಂಟರ್ ಪ್ರೈಸಸ್ ಸಂಸ್ಥೆಯ ಪರವಾಗಿ ಮಾತನಾಡುತ್ತಿರುವುದಾಗಿ ಹೇಳಿ ಪಾರ್ಟ್ ಟೈಮ್ ಕೆಲಸ ನೀಡುವುದಾಗಿ ತಿಳಿಸಿದ್ದ. ಆ.25ರಂದು ವಾಟ್ಸ್‌ಆ್ಯಪ್‌ನಲ್ಲಿ ಕಳುಹಿಸಿದ್ದ ಕ್ಯೂಆರ್ ಕೋಡ್‌ಗೆ ನೋಂದಣಿ ಶುಲ್ಕ 1,000 ರೂ. ಪಾವತಿಸಿದ್ದೆ. ಬಳಿಕ ಕೆಲವರು ಮ್ಯಾನೇಜರ್, ಅಕೌಂಟೆಂಟ್ ಎಂದು ಹೇಳಿ 3.51,003 ರೂ.ವನ್ನು ಪಡೆದು ಕೆಲಸ ಕೊಡದೆ, ಹಣವನ್ನೂ ಮರಳಿಸದೆ ವಂಚಿಸಿರುವುದಾಗಿ 44ರ ಹರೆಯದ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!