ಸ್ಥಳೀಯರಿಂದ ದೂರು: ಮಾಲೀಕರಿಗೆ ವಿಟ್ಲ ಪಂಚಾಯತ್ ಎಚ್ಚರಿಕೆ!






ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ಬಸವನಗುಡಿ ಪ್ರದೇಶದ ನಿವಾಸಿಗಳು ವಿಟ್ಲ ಪಟ್ಟಣ ಪಂಚಾಯತ್ ಗೆ ದೂರ ಸಲ್ಲಿಸಿ ಬಸವನಗುಡಿ ಪ್ರದೇಶದಲ್ಲಿ 2 ಭಾರೀ ಗಾತ್ರದ ಎತ್ತುಗಳು ಗದ್ದೆಯಲ್ಲಿ ಭತ್ತದ ಕೃಷಿಯನ್ನು ಹಾನಿ ಮಾಡುತ್ತಿರುವ ಬಗ್ಗೆ ಹಾಗೂ ಸದ್ರಿ ಪ್ರದೇಶದ ಮನೆಗಳಲ್ಲಿ ಕಟ್ಟಿಹಾಕಿರುವ ದನಗಳಿಗೆ ಉಪದ್ರ ನೀಡುತ್ತಿರುವುದಾಗಿ ಮತ್ತು ಸಾರ್ವಜನಿಕರ ವಾಹನ ಸಂಚಾರಕ್ಕೆ ಅಡಚಣೆ ಉಂಟು ಮಾಡುತ್ತಿರುವುದಲ್ಲದೆ ಸಾರ್ವಜನಿಕರಿಗೆ ಉಪದ್ರ ಮಾಡುತ್ತಿರುವುದಾಗಿ ವಿಟ್ಲ ಪಟ್ಟಣ ಪಂಚಾಯತ್ ಗೆ ದೂರು ಸಲ್ಲಿಸಿರುತ್ತಾರೆ.
ಆದ್ದರಿಂದ ಈ ಪ್ರದೇಶದಲ್ಲಿ ಬೀಡಾಡಿಯಾಗಿ ಬಿಟ್ಟಿರುವ ಎತ್ತುಗಳ ಮಾಲೀಕರು ಯಾರಾದರೂ ಇದ್ದಲ್ಲಿ ಸಾರ್ವಜನಿಕ ರಸ್ತೆಗೆ ಬಿಡದೆ ಕಟ್ಟಿಹಾಕುವುದು. ಇನ್ನು ಮುಂದೆ ಇದೇ ರೀತಿ ಮುಂದುವರಿದಲ್ಲಿ ಸಾರ್ವಜನಿಕರಿಗೆ ಉಪದ್ರ ಉಂಟು ಮಾಡುತ್ತಿರುವ ಎತ್ತುಗಳನ್ನು ವಿಟ್ಲ ಪಟ್ಟಣ ಪಂಚಾಯತ್ ವತಿಯಿಂದ ಹಿಡಿದು ಗೋಶಾಲೆಗೆ ಸಾಗಿಸಲು ಕ್ರಮವಹಿಸಲಾಗುವುದು ಎಂದು ಪಂಚಾಯತ್ ನ ಮುಖ್ಯಾಧಿಕಾರಿಗಳು ಎತ್ತುಗಳ ಮಾಲಿಕರಿಗೆ ಪ್ರಕಟನೆ ಮೂಲಕ ತಿಳಿಸಿದ್ದಾರೆ.







