

ಪುತ್ತೂರು, ಜೂ.26: ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಬಿಲ್ಲವ ಸಮುದಾಯದ ಅಭಿವೃದ್ಧಿಗೆ ಸಂಘಟಿತವಾಗಿ ಶ್ರಮಿಸುವ ಉದ್ದೇಶದಿಂದ ಪುತ್ತೂರಿನಲ್ಲಿ ನೂತನವಾಗಿ ‘ಬಿಲ್ಲವ ಬ್ರಿಗೇಡ್’ ಸಂಘಟನೆಯನ್ನು ರಚಿಸಲಾಗಿದ್ದು, ಅದರ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಜೂನ್ 25ರಂದು ಪುತ್ತೂರಿನ ಮಾಜಿ ಸೈನಿಕರ ಭವನದಲ್ಲಿ ನಡೆಯಿತು.




ಸಭೆಯಲ್ಲಿ ಸಂಘಟನೆಯ ಪ್ರಥಮ ಗೌರವಾಧ್ಯಕ್ಷರಾಗಿ ಡಾ. ರಾಜಾರಾಂ ಕೆ.ಬಿ., ಅಧ್ಯಕ್ಷರಾಗಿ ಜಯಪ್ರಕಾಶ್ ಬದಿನಾರು ಕೋಡಿಂಬಾಡಿ, ಪ್ರಧಾನ ಕಾರ್ಯದರ್ಶಿಯಾಗಿ ರಂಜಿತ್ ಸುವರ್ಣ ಪೆರಿಯಡ್ಕ ಹಾಗೂ ಕೋಶಾಧಿಕಾರಿಯಾಗಿ ಚಂದ್ರಶೇಖರ ಕಲ್ಲಗುಡ್ಡೆ ಅವರನ್ನು ಆಯ್ಕೆ ಮಾಡಲಾಯಿತು.
ಗೌರವ ಸಲಹೆಗಾರರಾಗಿ ಸಂಜೀವ ಪೂಜಾರಿ ಕೂರೇಲು, ಪದ್ಮನಾಭ ಪೂಜಾರಿ ಅಳಿಕೆ ಹಾಗೂ ದೇವಾನಂದ ಕೆ. ನೇಮಕಗೊಂಡರು. ಉಪಾಧ್ಯಕ್ಷರಾಗಿ ಅಣ್ಣಿ ಪೂಜಾರಿ ಕೆಮ್ಮಾಯಿ, ಮೋಹನ್ ಗುರ್ಜಿನಡ್ಕ ಮತ್ತು ಜಗದೀಶ್ ಪೂಜಾರಿ ನೇರಳಕಟ್ಟೆ ಆಯ್ಕೆಯಾದರು.
ಜತೆ ಕಾರ್ಯದರ್ಶಿಗಳಾಗಿ ಹರೀಶ್ ಬಂಗೇರ, ಪ್ರವೀಣ್ ಅಳಿಕೆ ಸಣ್ಣಗುತ್ತು ಹಾಗೂ ಕಿರಣ್ ಕುಮಾರ್ ಬಸಂತಕೋಡಿ ಅವರನ್ನು ಆಯ್ಕೆ ಮಾಡಲಾಯಿತು. ಕಾನೂನು ಸಲಹೆಗಾರರಾಗಿ ಮನೋಹರ ಎ. ಆರುವಾರಗುತ್ತು ಮತ್ತು ಕುಮಾರನಾಥ ಎಸ್. ಕೋಡಿಂಬಾಡಿ, ಮಾಧ್ಯಮ ಸಲಹೆಗಾರರಾಗಿ ಸಂತೋಷ್ ಕುಮಾರ್ ಶಾಂತಿನಗರ ನೇಮಕಗೊಂಡರು.
ಪ್ರಚಾರ ಸಮಿತಿ ಪ್ರಮುಖರಾಗಿ ಅಜಿತ್ ಕೆ.ಆರ್. ಪೂಜಾರಿ ಕೋಡಿಂಬಾಡಿ ಹಾಗೂ ಪೃಥ್ವಿರಾಜ್ ಗೆಣಸಿನ ಕುಮೇರು, ಸಲಹೆಗಾರರಾಗಿ ನವೀನ್ ಕರ್ಕೇರ, ಎಲ್ಯಣ್ಣ ಪೂಜಾರಿ, ಹರೀಶ್ ನಿಡ್ನಳ್ಳಿ ಮತ್ತು ಶಿವಪ್ರಸಾದ್ ಇರ್ದೆ ಅವರನ್ನು ಆಯ್ಕೆ ಮಾಡಲಾಯಿತು. ಸಂಘಟನಾ ಕಾರ್ಯದರ್ಶಿಗಳಾಗಿ ನಾರಾಯಣ ಪೂಜಾರಿ ಇರ್ದೆ, ಕರುಣಾಕರ ಕರ್ಕೇರ ಬಲ್ನಾಡು ಹಾಗೂ ರಾಜೇಶ್ ಅರ್ಲಪದವು ನೇಮಕಗೊಂಡರು.
ಸಭೆಯಲ್ಲಿ ಸಂಘಟನೆಯ ಬಲವರ್ಧನೆ, ಸಮಾಜದ ಸಮಗ್ರ ಅಭಿವೃದ್ಧಿ, ಯುವಜನರನ್ನು ಸಂಘಟಿಸುವುದು ಹಾಗೂ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ವಿವಿಧ ಸಾಮಾಜಿಕ ಕಾರ್ಯಕ್ರಮಗಳು ಮತ್ತು ಯೋಜನೆಗಳ ಕುರಿತು ಸದಸ್ಯರು ಚರ್ಚಿಸಿ ಅಭಿಪ್ರಾಯ ವಿನಿಮಯ ನಡೆಸಿದರು.








