Saturday, June 27, 2026
spot_imgspot_img
spot_imgspot_img

ಆಮದು ಔಷಧಿಗಳ ದಾಸ್ತಾನು ಅವಧಿ ನಿಯಮ ಬದಲಾವಣೆ: ಕೇಂದ್ರದಿಂದ ಕರಡು ಪ್ರಸ್ತಾವ

- Advertisement -
- Advertisement -


ನವದೆಹಲಿ, ಜೂ.26: ಆಮದು ಮಾಡಿಕೊಳ್ಳುವ ಔಷಧಿಗಳ ಕನಿಷ್ಠ ದಾಸ್ತಾನು (ಶೆಲ್ಫ್ ಲೈಫ್) ಅವಧಿಗೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆ ತರಲು ಕೇಂದ್ರ ಆರೋಗ್ಯ ಸಚಿವಾಲಯ ಕರಡು ಪ್ರಸ್ತಾವ ಹೊರಡಿಸಿದೆ.


ಪ್ರಸ್ತುತ ಜಾರಿಯಲ್ಲಿರುವ ನಿಯಮದ ಪ್ರಕಾರ, ಭಾರತಕ್ಕೆ ಆಮದು ಮಾಡುವ ಔಷಧಿಗಳು ಒಟ್ಟು ಶೆಲ್ಫ್ ಲೈಫ್‌ನ ಕನಿಷ್ಠ ಶೇ.60ರಷ್ಟು ಬಳಕೆಯೋಗ್ಯ ಅವಧಿಯನ್ನು ಹೊಂದಿರಬೇಕು. ಆದರೆ ಹೊಸ ಕರಡು ತಿದ್ದುಪಡಿಯಂತೆ, ಶೇಕಡಾವಾರು ಮಾನದಂಡದ ಬದಲಿಗೆ ಕನಿಷ್ಠ 12 ತಿಂಗಳ ಶೆಲ್ಫ್ ಲೈಫ್ ಉಳಿದಿರುವ ಔಷಧಿಗಳನ್ನಷ್ಟೇ ಆಮದು ಮಾಡಲು ಅವಕಾಶ ಕಲ್ಪಿಸುವ ಪ್ರಸ್ತಾವನೆ ಮಾಡಲಾಗಿದೆ.


1945ರ ಔಷಧ ಮತ್ತು ಸೌಂದರ್ಯವರ್ಧಕಗಳ ನಿಯಮಾವಳಿಯ ನಿಯಮ 31ಕ್ಕೆ ಈ ತಿದ್ದುಪಡಿ ಪ್ರಸ್ತಾಪಿಸಲಾಗಿದ್ದು, ದೇಶದ ಔಷಧ ಉತ್ಪಾದನೆ ಮತ್ತು ಆಮದು-ರಫ್ತು ವಲಯದಲ್ಲಿ ವ್ಯವಹಾರ ಸುಗಮಗೊಳಿಸುವ ಉದ್ದೇಶ ಹೊಂದಿದೆ.


ಪ್ರಸ್ತುತ ನಿಯಮದಂತೆ, ಒಟ್ಟು ಶೆಲ್ಫ್ ಲೈಫ್‌ನ ಶೇ.60ಕ್ಕಿಂತ ಕಡಿಮೆ ಬಳಕೆಯೋಗ್ಯ ಅವಧಿ ಉಳಿದಿರುವ ಯಾವುದೇ ಆಮದು ಔಷಧಿಯನ್ನು ಭಾರತಕ್ಕೆ ತರಲು ಅನುಮತಿ ಇಲ್ಲ. ಹೊಸ ಕರಡು ನಿಯಮ ಜಾರಿಯಾದರೆ, ಈ ಮಾನದಂಡದ ಬದಲಿಗೆ 12 ತಿಂಗಳ ಕನಿಷ್ಠ ಶೆಲ್ಫ್ ಲೈಫ್ ಕಡ್ಡಾಯವಾಗಲಿದೆ.

- Advertisement -

Related news

error: Content is protected !!