Monday, June 29, 2026
spot_imgspot_img
spot_imgspot_img

ಅಯೋಧ್ಯೆ ಪ್ರಕರಣ: ತಪ್ಪಿತಸ್ಥರು ಎಷ್ಟೇ ಪ್ರಭಾವಿಗಳಾಗಿದ್ದರೂ ಕಠಿಣ ಶಿಕ್ಷೆ-ಮುಖ್ಯಮಂತ್ರಿ ಡಿಕೆಶಿ

- Advertisement -
- Advertisement -

ಬೆಂಗಳೂರು, ಜೂ. 29: ಅಯೋಧ್ಯೆಯ ರಾಮಮಂದಿರಕ್ಕೆ ಭಕ್ತರು ನೀಡಿದ ದೇಣಿಗೆಯ ದುರುಪಯೋಗದ ಆರೋಪಗಳು ತೀವ್ರ ಕಳವಳಕಾರಿಯಾಗಿದೆ ಎಂದು ಮುಖ್ಯಮಂತ್ರಿ D. K. Shivakumar ಹೇಳಿದ್ದಾರೆ.ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿರುವ ಅವರು, ರಾಮಮಂದಿರಕ್ಕೆ ಲಕ್ಷಾಂತರ ಭಕ್ತರು ಅಪಾರ ಶ್ರದ್ಧೆ ಹಾಗೂ ನಿಸ್ವಾರ್ಥ ಭಾವದಿಂದ ಸಮರ್ಪಿಸಿದ ಪ್ರತಿಯೊಂದು ದೇಣಿಗೆಯೂ ಪವಿತ್ರ ಕಾರ್ಯದ ಮೇಲಿನ ನಂಬಿಕೆಯ ಪ್ರತೀಕವಾಗಿದೆ. ಆ ನಂಬಿಕೆಗೆ ದ್ರೋಹ ಬಗೆಯುವುದು ಸಾರ್ವಜನಿಕ ವಿಶ್ವಾಸಕ್ಕೂ, ಧಾರ್ಮಿಕ ಸಂಸ್ಥೆಗಳು ಎತ್ತಿಹಿಡಿಯಬೇಕಾದ ಮೌಲ್ಯಗಳಿಗೂ ಅಪಚಾರವಾಗಿದೆ ಎಂದು ಹೇಳಿದ್ದಾರೆ.ಪೂಜಾ ಸ್ಥಳಗಳು ಮತ್ತು ಸಾರ್ವಜನಿಕ ದೇಣಿಗೆಗಳಿಗೆ ಸಂಬಂಧಿಸಿದ ಎಲ್ಲ ವಿಚಾರಗಳಲ್ಲಿ ಪಾರದರ್ಶಕತೆ, ಸಮಗ್ರತೆ ಹಾಗೂ ಹೊಣೆಗಾರಿಕೆ ಇರಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ತನಿಖೆ ನ್ಯಾಯಯುತ, ಸಮಗ್ರ ಹಾಗೂ ನಿಷ್ಪಕ್ಷಪಾತವಾಗಿರಬೇಕು. ತಪ್ಪಿತಸ್ಥರು ಎಷ್ಟೇ ಪ್ರಭಾವಿಗಳಾಗಿದ್ದರೂ ಕಾನೂನಿನ ಮುಂದೆ ತಂದು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಆಗ ಮಾತ್ರ ಲಕ್ಷಾಂತರ ಭಕ್ತರ ವಿಶ್ವಾಸವನ್ನು ಉಳಿಸಿಕೊಳ್ಳಲು ಸಾಧ್ಯ. ಧಾರ್ಮಿಕ ನಂಬಿಕೆಯನ್ನು ವೈಯಕ್ತಿಕ ಲಾಭಕ್ಕಾಗಿ ದುರುಪಯೋಗಪಡಿಸಿಕೊಳ್ಳಬಾರದು ಎಂದು ಡಿಕೆ ಶಿವಕುಮಾರ್ ಆಗ್ರಹಿಸಿದ್ದಾರೆ.

- Advertisement -

Related news

error: Content is protected !!