Monday, June 29, 2026
spot_imgspot_img
spot_imgspot_img

‘ವಿಜಯ್‌ ಸರ್ಕಾರ 3 ರಿಂದ 6 ತಿಂಗಳಲ್ಲಿ ಪತನವಾಗುತ್ತದೆ’ – ಎಂ.ಕೆ ಸ್ಟಾಲಿನ್ ಭವಿಷ್ಯ

- Advertisement -
- Advertisement -

ಚೆನ್ನೈ: ಸಿಎಂ ಜೋಸೆಫ್‌ ವಿಜಯ್‌ ನೇತೃತ್ವದ ಟಿವಿಕೆ ಸರ್ಕಾರ 5 ವರ್ಷಗಳ ವರೆಗೆ ಉಳಿಯುವುದಿಲ್ಲ. 3 ರಿಂದ 6 ತಿಂಗಳಲ್ಲಿ ಪತನವಾಗುತ್ತದೆ ಎಂದು ಮಾಜಿ ಸಿಎಂ ಹಾಗೂ ಡಿಎಂಕೆ ಪಕ್ಷದ ಅಧ್ಯಕ್ಷ ಎಂ.ಕೆ ಸ್ಟಾಲಿನ್‌ ಭವಿಷ್ಯ ನುಡಿದಿದ್ದಾರೆ.

ಪ್ರಸ್ತುತ ರಾಜಕೀಯ ಬೆಳವಣಿಗೆ ಕುರಿತು ಡಿಎಂಕೆ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಸ್ಟಾಲಿನ್‌ ಅವರು, ವಿಜಯ್‌ ಸರ್ಕಾರದ ಪತನದ ಬಗ್ಗೆ ಭವಿಷ್ಯ ನುಡಿದಿದ್ದಾರೆ.

ವಿಜಯ್‌ ಅವರ ಸರ್ಕಾರ ಮೈತ್ರಿ ಪಕ್ಷಗಳ ಬೆಂಬಲದಿಂದಷ್ಟೇ ಬದುಕುಳಿದಿದೆ. ಈ ಸರ್ಕಾರ 5 ವರ್ಷ ಪೂರ್ಣಗೊಳ್ಳುವುದಿಲ್ಲ. ವಿಜಯ್ ಅವರದ್ದು ಅಲ್ಪಸಂಖ್ಯಾತ ಸರ್ಕಾರವಾಗಿದ್ದು, ಮುಂದಿನ 3 ರಿಂದ 6 ತಿಂಗಳ ಒಳಗೆ ಪತನಗೊಳ್ಳಬಹುದು ಎಂದು ಹೇಳಿದ್ದಾರೆ.

ಆಡಳಿತಾರೂಢ ಟಿವಿಕೆ ಸ್ವತಂತ್ರವಾಗಿ ಆಡಳಿತ ನಡೆಸಲು ಪೂರ್ಣ ಜನಾದೇಶ ಹೊಂದಿಲ್ಲ. ಅಗತ್ಯ 118 ಬಹುಮತದ ಪೈಕಿ 108 ಸ್ಥಾನಗಳನ್ನ ಮಾತ್ರ ಗಳಿಸಿದೆ. ಈ ಚುನಾವಣೆಯಲ್ಲಿ ಜನ ಡಿಎಂಕೆ ಸರ್ಕಾರ ರಚಿಸಬೇಕೆಂದೇ ಮತ ಚಲಾಯಿಸಿದ್ದರು. ಆದರೆ ನಮ್ಮ ಮೈತ್ರಿಕೂಟದ ಭಾಗವಾಗಿದ್ದ ಕೆಲ ಪಕ್ಷಗಳ ತಂತ್ರ ಹಾಗೂ ಅವರ ಜೊತೆಗಿನ ಹೊಂದಾಣಿಕೆಯಿಂದ ಟಿವಿಕೆ ಸರ್ಕಾರ ಜೀವಂತವಾಗಿದೆ ಎಂದಿದ್ದಾರೆ ಸ್ಟಾಲಿನ್.

ಇದೊಂದು ಅಲುಗಾಡುವ ಸೆಟಪ್, ಈ ವಾಹನ ಯಾವ ಜಂಕ್ಷನ್ ಅಥವಾ ತಿರುವಿನಲ್ಲಿ ತನ್ನ ಸಮತೋಲನ ಕಳೆದುಕೊಂಡು ಹಠಾತ್ ಸ್ಥಗಿತಗೊಳ್ಳುತ್ತೋ ಗೊತ್ತಿಲ್ಲ. ಆದ್ದರಿಂದ ಚುನಾವಣೆಗಳು ಯಾವುದೇ ಸಮಯದಲ್ಲಿ ಬರಬಹುದು. 5 ವರ್ಷಗಳ ಕಾಲ ಕಾಯುವ ಅಗತ್ಯವಿಲ್ಲ ಎಂದು ಭವಿಷ್ಯ ನುಡಿದಿರುವುದಾಗಿ ವರದಿಯಿಂದ ತಿಳಿದುಬಂದಿದೆ.

- Advertisement -

Related news

error: Content is protected !!