Thursday, July 2, 2026
spot_imgspot_img
spot_imgspot_img

ಹಸು, ಕರುಗಳ ವಧೆ ನಿಷೇಧಿಸಿ ಹೈಕೋರ್ಟ್ ಆದೇಶ -ಸುಪ್ರೀಂಗೆ ಮೇಲ್ಮನವಿ ಸಲ್ಲಿಸಿದ ತಮಿಳುನಾಡು ಸರ್ಕಾರ

- Advertisement -
- Advertisement -

ನವದೆಹಲಿ: ಬಕ್ರೀದ್ ಸೇರಿದಂತೆ ಇತರೆ ಬೇರೆ ಯಾವುದೇ ದಿನ ಹಸು ಮತ್ತು ಕರುಗಳ ವಧೆಯನ್ನು ಮಾಡಬಾರದು ಎಂದು ಮದ್ರಾಸ್ ಹೈಕೋರ್ಟ್‌ನ ನೀಡಿದ ಆದೇಶ ಪ್ರಶ್ನಿಸಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದೆ.

ತಮಿಳುನಾಡು ಸರ್ಕಾರದ ಪಶುಸಂಗೋಪನೆ, ಹಾಲು ಉತ್ಪಾದನೆ, ಮೀನುಗಾರಿಕೆ ಮತ್ತು ಮೀನುಗಾರರ ಕಲ್ಯಾಣ ಇಲಾಖೆ ಕಾರ್ಯದರ್ಶಿ ಮೂಲಕ ಅರ್ಜಿ ಸಲ್ಲಿಸಲಾಗಿದ್ದು, ಅರ್ಜಿಯಲ್ಲಿ ತಮಿಳುನಾಡು ಸರ್ಕಾರವು ಹೈಕೋರ್ಟ್ ತನ್ನ ಮೂಲ ಅರ್ಜಿಯ ವ್ಯಾಪ್ತಿಯನ್ನು ಮೀರಿ ಆದೇಶ ಹೊರಡಿಸಿದೆ ಎಂದು ವಾದಿಸಿದೆ.

ಕೊಯಂಬತ್ತೂರ್‌ನಲ್ಲಿ ಬಕ್ರೀದ್ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಹಸುಗಳ ವಧೆ ತಡೆಯುವ ಬಗ್ಗೆ ಮಾತ್ರ ಮೂಲ ಅರ್ಜಿ ಇತ್ತು. ಆದರೆ ಹೈಕೋರ್ಟ್ ರಾಜ್ಯದಾದ್ಯಂತ ಹಸು ವಧೆಗೆ ಸಂಪೂರ್ಣ ನಿಷೇಧ ಹೇರಿದೆ ಎಂದು ಆರೋಪಿಸಲಾಗಿದೆ.

ತಮಿಳುನಾಡು ಪ್ರಾಣಿ ಸಂರಕ್ಷಣಾ ಕಾಯ್ದೆ 1958, ನಗರ ಸ್ಥಳೀಯ ಸಂಸ್ಥೆಗಳ ಕಾಯ್ದೆ 1998 ಮತ್ತು ಇತರ ನಿಯಮಗಳು ಹಸು ವಧೆಯನ್ನು ನಿಯಂತ್ರಿಸುವುದನ್ನು ಬೆಂಬಲಿಸುತ್ತವೆಯೇ ಹೊರತು ಪೂರ್ಣ ನಿಷೇಧವನ್ನಲ್ಲ. ಹೈಕೋರ್ಟ್ ಧಾರ್ಮಿಕ ವಿಷಯಗಳ ಬಗ್ಗೆ (ಇಸ್ಲಾಮ್‌ನಲ್ಲಿ ಹಸು ಬಲಿ ಅಗತ್ಯವೇ ಎಂಬುದು) ಚರ್ಚಿಸಿದ್ದು ಅನಗತ್ಯ ಮತ್ತು ಅರ್ಜಿಯ ವ್ಯಾಪ್ತಿಗೆ ಮೀರಿದೆ.

ರಾಜ್ಯ ಸರ್ಕಾರವು ಸುಪ್ರೀಂಕೋರ್ಟ್‌ನಲ್ಲಿ ಹೈಕೋರ್ಟ್ ತೀರ್ಪನ್ನು ರದ್ದುಗೊಳಿಸುವಂತೆ ಮತ್ತು ಹೈಕೋರ್ಟ್ ಆದೇಶಕ್ಕೆ ತಾತ್ಕಾಲಿಕ ಸ್ಥಗಿತ ಹೇರಿಸುವಂತೆ ಕೋರಿ, ವಕೀಲ ಜಯಶ್ರೀ ನರಸಿಂಹನ್ ಅವರು ಅರ್ಜಿಯನ್ನು ಸಲ್ಲಿಸಿದ್ದಾರೆ ಎಂದು ವರದಿಯಿಂದ ತಿಳಿದುಬಂದಿದೆ.

- Advertisement -

Related news

error: Content is protected !!