
ಸುಳ್ಯ: ಜಾಲ್ಲೂರು ಸಮೀಪದ ಮಾಬಲಡ್ಕ ನದಿತೀರದಲ್ಲಿ ಯುವತಿಯೊಂದಿಗೆ ಫೋಟೋ ತೆಗೆಯುತ್ತಿದ್ದ ಯುವಕನ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಮೂವರು ಸ್ಥಳೀಯರ ವಿರುದ್ಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸುಳ್ಯದ ಜಯನಗರ ನಿವಾಸಿ ಭವಿಷ್ ಹಲ್ಲೆಗೊಳಗಾದ ಯುವಕ. ಅವರು ತಮ್ಮ ಗೆಳತಿಯೊಂದಿಗೆ ನದಿತೀರದಲ್ಲಿ ಫೋಟೋ ತೆಗೆಯುತ್ತಿದ್ದ ವೇಳೆ ಜನಾರ್ಧನ, ವಸಂತ ಹಾಗೂ ಅರವಿಂದ ಎಂಬ ಮೂವರು ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, “ನೀವು ನದಿತೀರವನ್ನು ಮಾಲಿನ್ಯಗೊಳಿಸುತ್ತಿದ್ದೀರಿ” ಎಂದು ಗದರಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಬಳಿಕ ಭವಿಷ್ ಅವರು ಮೋಟಾರ್‌ಸೈಕಲ್‌ನಲ್ಲಿ ಸ್ಥಳದಿಂದ ತೆರಳಲು ಮುಂದಾದಾಗ ಆರೋಪಿಗಳು ವಾಹನವನ್ನು ಅಡ್ಡಗಟ್ಟಿ ಕೀ ಕಸಿದುಕೊಂಡು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಹಲ್ಲೆಯಿಂದ ಭವಿಷ್ ಅವರ ಕೈ ಹಾಗೂ ಮುಖಕ್ಕೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.ದೂರಿನ ಆಧಾರದ ಮೇಲೆ ಜನಾರ್ಧನ, ವಸಂತ ಹಾಗೂ ಅರವಿಂದ ವಿರುದ್ಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.








