Friday, July 3, 2026
spot_imgspot_img
spot_imgspot_img

ಹಾಸನ:ಟೀ ಕುಡಿಯುವಾಗಲೇ ಕುಸಿದುಬಿದ್ದು ಟ್ರಕ್‌ ಚಾಲಕ ದುರ್ಮರಣ

- Advertisement -
- Advertisement -

ಹಾಸನ: ಟೀ ಕುಡಿಯುವಾಗಲೇ ಟ್ರಕ್‌ ಚಾಲಕನೊಬ್ಬ ಕುಸಿದುಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸಕಲೇಶಪುರದ ಬಾಳುಪೇಟೆಯಲ್ಲಿ ನಡೆದಿದೆ.

ಉತ್ತರಪ್ರದೇಶದ ಬರೇಲಿ ಮೂಲದ ಅಮರ್ ಸಿಂಗ್ ಪೈ (50) ಸಾವನ್ನಪ್ಪಿದ ಟ್ರಕ್‌ ಚಾಲಕ. ಟ್ರಕ್‌ ಮಂಗಳೂರು ಕಡೆಗೆ ತೆರಳುತ್ತಿತ್ತು. ಮಾರ್ಗ ಮಧ್ಯೆ ಟೀ ಕುಡಿಯಲು ಚಾಲಕ ಟ್ರಕ್‌ ನಿಲ್ಲಿಸಿದ್ದರು, ಈ ವೇಳೆ ಟೀ ಕುಡಿಯುವಾಗಲೇ ಕುಸಿದುಬಿದ್ದು ಅವರು ಸಾವನ್ನಪ್ಪಿದ್ದಾರೆ.

ಅಮರ್ ಸಿಂಗ್ ಕುಸಿದು ಬೀಳುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಹೃದಯಾಘಾತದಿಂದ ಅವರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಸಕಲೇಶಪುರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!