Thursday, July 16, 2026
spot_imgspot_img
spot_imgspot_img

ಅಳಿಕೆ: ಶ್ರೀ ಸತ್ಯ ಸಾಯಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ವಿಶೇಷ ಕಾರ್ಯಗಾರ

- Advertisement -
- Advertisement -

ಅಳಿಕೆ: ಶ್ರೀ ಸತ್ಯ ಸಾಯಿ ಪದವಿ ಪೂರ್ವ ಕಾಲೇಜು ಅಳಿಕೆಯಲ್ಲಿ ಜು.16 ಗುರುವಾರದಂದು ಹದಿಹರೆಯದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ವಿಶೇಷ ಕಾರ್ಯಗಾರ ನಡೆಯಿತು.

ಹದಿಹರೆಯದಲ್ಲಿ ಉಂಟಾಗುವ ಮಾನಸಿಕ ಮತ್ತು ಶಾರೀರಿಕ ಬದಲಾವಣೆಗಳು ಹಾಗೂ ಅದನ್ನು ಎದುರಿಸಲು ಇರಬೇಕಾದ ಸಿದ್ಧತೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು.

ಕಾರ್ಯಗಾರದಲ್ಲಿ ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಆಪ್ತ ಸಮಾಲೋಚಕಿ ಶ್ರೀಮತಿ ಶೃತಿ ಶೆಟ್ಟಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ವಿದ್ಯಾರ್ಥಿಗಳ ಎಲ್ಲಾ ಕುತೂಹಲಭರಿತ ಪ್ರಶ್ನೆಗಳಿಗೆ ಅವರು ಸಮಾಧಾನಕರ ಉತ್ತರಗಳನ್ನು ನೀಡಿದರು.

ಕಾಲೇಜಿನ ಪ್ರಾಂಶುಪಾಲರಾದ ವೆಂಕಟಕೃಷ್ಣ ಶರ್ಮಾ ಹಾಗೂ ಎಲ್ಲಾ ಉಪನ್ಯಾಸಕಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

- Advertisement -

Related news

error: Content is protected !!