Tuesday, July 21, 2026
spot_imgspot_img
spot_imgspot_img

ನಕಲಿ ಕರೆನ್ಸಿ ಮುದ್ರಣ ಪ್ರಕರಣ: ನಾಲ್ವರಿಗೆ ಪೊಲೀಸ್ ಕಸ್ಟಡಿ, ಮೂವರಿಗೆ ಆಗಸ್ಟ್ 1ರವರೆಗೆ ನ್ಯಾಯಾಂಗ ಬಂಧನ

- Advertisement -
- Advertisement -

ಬೆಳ್ತಂಗಡಿ: ಕಣಿಯೂರು ಗ್ರಾಮದ ಅಡೆಂಜ ಎಂಬಲ್ಲಿರುವ ಕಟ್ಟಡವೊಂದರಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಿಕೊಂಡು ಭಾರತೀಯ ನಕಲಿ ಕರೆನ್ಸಿ ನೋಟುಗಳನ್ನು ಮುದ್ರಿಸುತ್ತಿರುವ ಆರೋಪದಡಿ ಬಂಧಿತರಾದ ಏಳು ಆರೋಪಿಗಳಲ್ಲಿ ನಾಲ್ವರನ್ನು ಬೆಳ್ತಂಗಡಿ ನ್ಯಾಯಾಲಯ ಜು.26ರವರೆಗೆ ಬೆಳ್ತಂಗಡಿ ನ್ಯಾಯಾಲಯ ಪೊಲೀಸ್ ಕಸ್ಟಡಿಗೆ ಒಪ್ಪಿಸಿತ್ತು.

ಉಳಿದ ಮೂವರಿಗೆ ಆಗಸ್ಟ್ 1ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.ಆರೋಪಿಗಳಾದ ಇಬ್ರಾಹಿಂ, ಸಂದೀಪ್, ಸಿರಾಜುದ್ದೀನ್, ಇರ್ಷಾದ್ ನನ್ನು ಜುಲೈ 26ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಉಳಿದ ಶರೀಫ್ ಅಲಿಯಾಸ್ ಶರೀಪ್ ಮಹಮ್ಮದ್ ಕುಂಞ, ಮಹಮ್ಮದ್ ನಬಾಸ್, ಸಲ್ಮಾನ್ ಫಾರೀಸ್ ನನ್ನು ಆಗಸ್ಟ್ 1ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

- Advertisement -

Related news

error: Content is protected !!