Sunday, July 26, 2026
spot_imgspot_img
spot_imgspot_img

ಇಡ್ಕಿದು ಮನೆಯ ಅಂಗಳದಿಂದ ಕಳವಾಗಿದ್ದ ಬೈಕ್ ಬಿ.ಸಿ.ರೋಡ್‌ನಲ್ಲಿ ಪತ್ತೆ; ಆರೋಪಿಗಳ ಪತ್ತೆಗೆ ತನಿಖೆ ಚುರುಕು

- Advertisement -
- Advertisement -

ವಿಟ್ಲ, ಜು.26: ಬಂಟ್ವಾಳ ತಾಲೂಕಿನ ಇಡ್ಕಿದು ನಿವಾಸಿಯೊಬ್ಬರ ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಳವಾಗಿದ್ದ ಬೈಕ್ ಬಿ.ಸಿ.ರೋಡ್ ಸಮೀಪ ಪತ್ತೆಯಾಗಿದೆ.

ಇಡ್ಕಿದು ನಿವಾಸಿ ಆನಂದ ಸಪಲ್ಯ (53) ಅವರು ಜುಲೈ 25ರಂದು ಸಂಜೆ ತಮ್ಮ ಮನೆಯ ಅಂಗಳದಲ್ಲಿ KA-19-EY-6282 ನೋಂದಣಿಯ ದ್ವಿಚಕ್ರ ವಾಹನವನ್ನು ನಿಲ್ಲಿಸಿದ್ದರು. ಮರುದಿನ ಜುಲೈ 26ರಂದು ಬೆಳಿಗ್ಗೆ ವಾಹನ ಕಾಣೆಯಾಗಿರುವುದು ಗಮನಕ್ಕೆ ಬಂದಿತ್ತು.ಸುತ್ತಮುತ್ತಲಿನ ಪ್ರದೇಶದಲ್ಲಿ ಹುಡುಕಾಟ ನಡೆಸಿದರೂ ವಾಹನ ಪತ್ತೆಯಾಗದ ಹಿನ್ನೆಲೆಯಲ್ಲಿ ಅವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ದೂರಿನ ಆಧಾರದಲ್ಲಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 162/2026ರಡಿ ಕಲಂ 303(2) BNS-2023 ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಕಳವಾಗಿದ್ದ ಅಂದಾಜು ₹30,000 ಮೌಲ್ಯದ ದ್ವಿಚಕ್ರ ವಾಹನವು ಬಿ.ಸಿ.ರೋಡ್ ಬಳಿ ಪತ್ತೆಯಾಗಿದೆ. ಪ್ರಕರಣದ ತನಿಖೆಯನ್ನು ಮುಂದುವರಿಸಿರುವ ಪೊಲೀಸರು, ಕೃತ್ಯ ಎಸಗಿದ ಆರೋಪಿಗಳನ್ನು ಶೀಘ್ರವೇ ಪತ್ತೆಹಚ್ಚುವ ನಿರೀಕ್ಷೆಯಿದ್ದು, ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.

- Advertisement -

Related news

error: Content is protected !!