Tuesday, July 28, 2026
spot_imgspot_img
spot_imgspot_img

ಫೇಸ್‌ಬುಕ್‌ನಿಂದ ಪ್ರಧಾನಿ ಮೋದಿ ವಿಡಿಯೋ ನಿರ್ಬಂಧ – ತಾಂತ್ರಿಕ ದೋಷಕ್ಕೆ ಕ್ಷಮೆಯಾಚಿಸಿದ ಮೆಟಾ

- Advertisement -
- Advertisement -

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ಫೇಸ್‌ಬುಕ್‌ ಖಾತೆಯಲ್ಲಿ ಪೋಸ್ಟ್‌ ಮಾಡಲಾಗಿದ್ದ ವಿಡಿಯೋವನ್ನು ಸಾರ್ವಜನಿಕ ವೀಕ್ಷಣೆಯಿಂದ ತೆಗೆದುಹಾಕಿದ್ದಕ್ಕಾಗಿ ಮೆಟಾ ಸಂಸ್ಥೆ ಕ್ಷಮೆಯಾಚಿಸಿದೆ.

ಈ ಸಮಸ್ಯೆಯು ತಾಂತ್ರಿಕ ದೋಷದ ಪರಿಣಾಮದಿಂದ ಆಗಿದೆ, ಉದ್ದೇಶ ಪೂರ್ವಕವಾಗಿ ತೆಗೆದುಕೊಂಡ ಕ್ರಮವಲ್ಲ ಎಂದು ಮೆಟಾ ಸಂಸ್ಥೆ ಸ್ಪಷ್ಟನೆ ನೀಡಿದ್ದು, ಸೋಮವಾರ(ಜು.27) ವಿಡಿಯೋವನ್ನು ಮರುಸ್ಥಾಪಿಸಿದೆ.

ತಪ್ಪಾಗಿ ವಿಡಿಯೋ ಡಿಲೀಟ್‌ ಆಗಿದೆ, ಪುನಃ ವಿಡಿಯೋವನ್ನ ಮರುಸ್ಥಾಪಿಸಲಾಗಿದೆ. ತಪ್ಪಿಗೆ ನಾವು ಕ್ಷಮೆಯಾಚಿಸುತ್ತೇವೆ. ಇದು ಯಾವುದೇ ಉದ್ದೇಶಿತ ಕಾರ್ಯವಲ್ಲ ಎಂದು ಮೆಟಾ ವಕ್ತಾರರು ತಿಳಿಸಿದ್ದಾರೆ.

ಈ ಘಟನೆಯನ್ನು ಸರಕಾರವು “ಅತ್ಯಂತ ಗಂಭೀರವಾಗಿ” ಪರಿಗಣಿಸಿದೆ. ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯವು ಈಗಾಗಲೇ ಮೆಟಾ ಮತ್ತು ಇನ್‌ಸ್ಟಾಗ್ರಾಮ್‌ನ ಜಾಗತಿಕ ಮುಖ್ಯಸ್ಥರಿಗೆ ಸಮನ್ಸ್ ಜಾರಿಗೊಳಿಸಿದ್ದು, ವಿಡಿಯೋ ತಾತ್ಕಾಲಿಕವಾಗಿ ತೆಗೆದುಹಾಕಲ್ಪಟ್ಟ ಬಗ್ಗೆ ವಿವರ ನೀಡುವಂತೆ ಸೂಚಿಸಿದೆ ಎಂದು ಹೇಳಲಾಗಿದೆ.

ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಹಿನ್ನೆಲೆಯಲ್ಲಿ ದೇಶದಾದ್ಯಂತ ಸಾರ್ವಜನಿಕರಲ್ಲಿ ವ್ಯಕ್ತವಾಗಿದ್ದ ಆತಂಕ ಹಾಗೂ ಅಂದಿನ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆದ ಪ್ರತಿಭಟನೆಗಳ ನಡುವೆಯೇ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಈ ವಿಡಿಯೋದಲ್ಲಿ ನೇರ ಸಂದೇಶ ನೀಡಿದ್ದರು. ಪರೀಕ್ಷಾ ಅಕ್ರಮದ ಬಗ್ಗೆ ಸರಕಾರದ ನಿಲುವು ವಿವರಿಸುವ ಜೊತೆಗೆ ಶಾಂತಿ ಕಾಪಾಡುವಂತೆ ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ವಿದ್ಯಾರ್ಥಿಗಳಿಗೆ ಭರವಸೆ ನೀಡಿದ್ದ ವಿಡಿಯೋವನ್ನು ಪ್ರಧಾನಿ ಮೋದಿ ಕಳೆದ ಗುರುವಾರ ಮಧ್ಯರಾತ್ರಿಯ ಬಳಿಕ ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದರು.

- Advertisement -

Related news

error: Content is protected !!