ಬಂಟ್ವಾಳ: ವಿಮೆನ್ ಇಂಡಿಯಾ ಮೂವ್ಮೆಂಟ್ (WIM) ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿಯ ಅಸೆಂಬ್ಲಿ ಪ್ರತಿನಿಧಿ ಸಭೆಯು ಪಾಣೆಮಂಗಳೂರಿನ ಎಚ್.ಎಚ್. ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ WIM ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷೆ ನುಸೈಬಾ ಕಲ್ಲಡ್ಕ ಅವರು ಧ್ವಜೋರೋಹಣ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಭೆಯಲ್ಲಿ ಕಳೆದ ಎರಡು ವರ್ಷಗಳ ಚಟುವಟಿಕೆಗಳ ವರದಿ ಹಾಗೂ ಲೆಕ್ಕಪತ್ರ ವರದಿಯನ್ನು ಕ್ಷೇತ್ರ ಸಮಿತಿಯ ಕಾರ್ಯದರ್ಶಿ ಝುಬೈದ ಬಂಟ್ವಾಳ ಹಾಗೂ ರುಫೈದಾ ಮಂಡಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಅಕ್ಬರ್ ಅಲಿ ಪೊನ್ನೋಡಿಯವರು ನಾಯಕತ್ವದ ಕುರಿತು ತರಬೇತಿಯನ್ನು ನೀಡಿದರು.
2026-29ನೇ ಸಾಲಿನ ನೂತನ ಸಮಿತಿಯ ಆಯ್ಕೆ ಪ್ರಕ್ರಿಯೆಯನ್ನು ಚುನಾವಣಾಧಿಕಾರಿಯಾಗಿ ಆಗಮಿಸಿದ್ದ ಝಹನ ಬಂಟ್ವಾಳ ಅವರು ನಡೆಸಿಕೊಟ್ಟರು. ನೂತನ ಪದಾಧಿಕಾರಿಗಳಾಗಿ:ಅಧ್ಯಕ್ಷೆ: ಝುಬೈದ ಬಂಟ್ವಾಳ, ಉಪಾಧ್ಯಕ್ಷೆ: ದುಲೈಕ ಪರ್ಲಿಯ,ಕಾರ್ಯದರ್ಶಿ: ಝೈನಬ ಕಾವಲ್ ಕಟ್ಟೆಜೊತೆ ಕಾರ್ಯದರ್ಶಿ: ಸಾಜಿದಾ ರಹೀಮ್, ಕೋಶಾಧಿಕಾರಿ: ಪೌಝಿಯ ಆಲಾಡಿ, ಸಮಿತಿ ಸದಸ್ಯರಾಗಿ ಮಮ್ತಾಝ್ ತಲಪಾಡಿ , ಸಂಶಾದ್ ಪರ್ಲಿಯಾ , ರಶೀನ ಬಂಟ್ವಾಳ ಹಾಗೂ ಸಫಾ ಸಲ್ಮಾ ಆಯ್ಕೆಯಾದರು.ಝುಬೈದಾ ಸ್ವಾಗತಿಸಿ ಸಾಜಿದಾ ರಹೀಂ ಧನ್ಯವಾದಗೈದರು .ಶಹನಾಝ್ ಕಾರ್ಯಕ್ರಮವನ್ನು ನಿರೂಪಿಸಿದರು.
ಕ್ಷೇತ್ರ ಸಮಿತಿ ಪದಾಧಿಕಾರಿಗಳು ಹಾಗೂ ವಿವಿಧ ಬ್ಲಾಕ್ ಸಮಿತಿ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.








