


ಬಂಟ್ವಾಳ, ಬೋಳಂತೂರು: ಬಿಕೆ ಬಾಯ್ಸ್ ವತಿಯಿಂದ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಬಂಗಾರಕೋಡಿಯಲ್ಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಧ್ವಜಾರೋಹಣವನ್ನು ಬಂಗಾರಕೋಡಿಯ ಮಹಮ್ಮದ್ ಕುಂಞಿ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಕೆ ಬಾಯ್ಸ್ ಅಧ್ಯಕ್ಷರಾದ ಮುಸ್ತಫಾ ಬಿ.ಕೆ. ವಹಿಸಿದ್ದರು.

ಕಾರ್ಯಕ್ರಮದಲ್ಲಿ ಅಕ್ಷಯ್ ಚಾರಿಟೇಬಲ್ ಟ್ರಸ್ಟ್‌ನ ಸ್ಥಾಪಕರಾದ ಕರೀಂ ಕದ್ಕರ್, ಅಕ್ಷಯ್ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷರಾದ ಝಕರಿಯ ನಾರ್ಶ, ಎಸ್‌ಡಿಪಿಐ ಬೋಳಂತೂರು ಘಟಕದ ಸದಸ್ಯರಾದ ಅಶ್ರಫ್ ಬೋಳಂತೂರು, ಹಮೀದ್ ಟೈಲರ್ ಹಿರಿಯರಾದ ಇಬ್ರಾಹಿಂ ಶೆಡ್ಡ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಜಾಫರ್ ಅಶ್ ಅರಿಯ ಅವರು ಸ್ವಾತಂತ್ರ್ಯೋತ್ಸವದ ಮಹತ್ವದ ಕುರಿತು ಪ್ರಾಸಂಗಿಕವಾಗಿ ಮಾತನಾಡಿದರು. ಕಾರ್ಯಕ್ರಮವನ್ನು ಸಿಜಿಪಿ ಸಕ್ರಿಯ ಕಾರ್ಯಕರ್ತ ಅಝೀಝ್ ಬಂಗಾರಕೋಡಿ ವಂದಿಸಿದರು.

ಬಿಕೆ ಬಾಯ್ಸ್ ಇದರ ಗೌರವಾಧ್ಯಕ್ಷರದ ಮುಸ್ತಫಾ ಬೋಳಂತೂರು. ಅವರು ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸ್ಥಳೀಯರು ಹಾಗೂ ಬಿಕೆ ಬಾಯ್ಸ್ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.








