- Advertisement -
- Advertisement -



ಕುಳ : ಯುವಕವೃಂದದ ವತಿಯಿಂದ ನಡೆಸಲಾಗುತ್ತಿರುವ ಆಗಸ್ಟ್ ತಿಂಗಳ “ಸ್ನೇಹಬಂಧು ಸಹಾಯನಿಧಿ ಯೋಜನೆ”ಯ ಚೆಕ್ ಅನ್ನು ಓಜಾಲ ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಗಣೇಶ್ ಪಾಂಡೇಲು ಇವರಿಗೆ ಯುವಕವೃಂದದ ಗೌರವಾಧ್ಯಕ್ಷರಾದ ದಯಾನಂದ ಶೆಟ್ಟಿ ನೀಡಿದರು.
ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಚೆಕ್ ನೀಡಲಾಯಿತು
ಈ ಸಂದರ್ಭದಲ್ಲಿ ಯುವಕವೃಂದದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಈ ತಿಂಗಳ ಸಹಾಯನಿಧಿ ಯೋಜನೆಗೆ ಆರ್ಥಿಕವಾಗಿ ಸಹಕರಿಸಿದ ಎಲ್ಲರಿಗೂ ಯುವಕವೃಂದದ ವತಿಯಿಂದ ಧನ್ಯವಾದಗಳನ್ನು ತಿಳಿಸಲಾಯಿತು.
- Advertisement -








