
ಮಂಗಳೂರು: ಲಯನ್ಸ್ ಕ್ಲಬ್ ಕುದ್ರೆಮುಖದ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಮಂಗಳೂರಿನ ಲಾಲ್‌ಬಾಗ್ ಸಮೀಪದ ಹೋಟೆಲ್ ಫುಡ್‌ಲ್ಯಾಂಡ್‌ನಲ್ಲಿ ನಡೆಯಿತು.ಕ್ಲಬ್‌ನ ನಿರ್ಗಮಿತ ಅಧ್ಯಕ್ಷ ಲ. ಸುಭಾಷ್ ರಾಥೋಡ್ ಅತಿಥಿಗಳನ್ನು ಸ್ವಾಗತಿಸಿದರು. ಜಿಲ್ಲಾ ಸಿಕ್ಯುಐನ ಮುಖ್ಯ ಸಂಯೋಜಕಿ ಲ. ಉಮಾ ಬಿ. ಹೆಗ್ಡೆ ಅವರು ಪದಗ್ರಹಣಾಧಿಕಾರಿಯಾಗಿ ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿ ಅಧಿಕಾರ ಹಸ್ತಾಂತರಿಸಿದರು.
ಈ ಸಂದರ್ಭ ಅವರ ಪತಿ ಲ. ಬಾಲಕೃಷ್ಣ ಹೆಗ್ಡೆ ಉಪಸ್ಥಿತರಿದ್ದರು.ಲ. ಡಾ. ಯೋಗೀಶ್ ಅವರು ನೂತನ ಪದಾಧಿಕಾರಿಗಳನ್ನು ಪರಿಚಯಿಸಿದರು. ಲ. ಸುಧೀರ್ ಕುಮಾರ್ ಅವರು ಮುಖ್ಯ ಅತಿಥಿಯನ್ನು ಪರಿಚಯಿಸಿದರು. 2026-27ನೇ ಸಾಲಿನ ಅಧ್ಯಕ್ಷರಾಗಿ ಲ. ನಾಗೇಶ್ ಕೆ., ಕಾರ್ಯದರ್ಶಿಯಾಗಿ ಲ. ಸುಧೀರ್ ಕುಮಾರ್ ಕೆ. ಹಾಗೂ ಖಜಾಂಚಿಯಾಗಿ ಲ. ಅಂಜನಪ್ಪ ಅಧಿಕಾರ ಸ್ವೀಕರಿಸಿದರು.ಕ್ಲಬ್‌ನ ಸದಸ್ಯರಾದ ಲ. ಭವಾನಿ ಶಂಕರ್ ಶೆಟ್ಟಿ, ಲ. ವಿನಾಯಗಂ, ಲ. ರವೀಂದ್ರ ಬಾಬು ಹಾಗೂ ಲ. ಸಾಗರ್ ನಾಯ್ಕ್ ಅವರಿಗೆ ವಿವಿಧ ಹುದ್ದೆಗಳ ಪ್ರಮಾಣವಚನ ಬೋಧಿಸಲಾಯಿತು.
ಕಾರ್ಯಕ್ರಮದಲ್ಲಿ ಐಪಿಡಿಜಿ ಲ. ಕುಡ್ಪಿ ಅರವಿಂದ ಶಣೈ, ಜಿಲ್ಲಾ ಸಂಪುಟ ಕಾರ್ಯದರ್ಶಿ ಲ. ಪ್ರಶಾಂತ್ ಶೆಟ್ಟಿ, ಪ್ರಾಂತ್ಯಾಧ್ಯಕ್ಷ ಲ. ಜಯರಾಜ್ ಪ್ರಕಾಶ್ ಹಾಗೂ ವಲಯಾಧ್ಯಕ್ಷ ಲ. ರಾಜೇಶ್ ಕಾಮತ್ ಉಪಸ್ಥಿತರಿದ್ದರು.ಪದಗ್ರಹಣಾಧಿಕಾರಿ ಲ. ಉಮಾ ಹೆಗ್ಡೆ ಹಾಗೂ ಅವರ ಪತಿ ಲ. ಬಾಲಕೃಷ್ಣ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು. ಉಪ ಜಿಲ್ಲಾ ರಾಜ್ಯಪಾಲರಾದ ಲ. ಗೋವರ್ಧನ ಶೆಟ್ಟಿ ಮತ್ತು ಲ. ವೆಂಕಟೇಶ್ ಹೆಬ್ಬಾರ್ ಅವರು ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ಲ. ಬ್ರಹ್ಮಮ್ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಲ. ಅಂಜನಪ್ಪ ವಂದನಾರ್ಪಣೆ ಸಲ್ಲಿಸಿದರು.








