ಮಣಿಪಾಲ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಜಾಗತಿಕ ಶೈಕ್ಷಣಿಕ ಕ್ಷೇತ್ರದಲ್ಲಿ ಮಟ್ಟದಲ್ಲಿ ಮತ್ತೊಂದು ಸಾಧನೆ ಮಾಡಿದೆ. ಶಾಂಫೈ ಬ್ಯಾಂಕಿಂಗ್ ಕನ್ಸಲ್ವೆನ್ಸಿಯ 2026ನೇ ಸಾಲಿನ ಪ್ರತಿಷ್ಠಿತ ‘ಅಕಾಡೆಮಿಕ್ ಬ್ಯಾಂಕಿಂಗ್ ಆಫ್ ವರ್ಲ್ಡ್ ಯೂನಿವರ್ಸಿಟೀಸ್’ ಪಟ್ಟಿಯಲ್ಲಿ ಮಾಹೆ 701-800ರ ಶ್ರೇಣಿಗೆ ಏರಿಕೆ ಕಂಡಿದೆ.
ಕಳೆದ ಬಾರಿ 801-900ರ ಶ್ರೇಣಿಯಲ್ಲಿದ್ದು ಇದೀಗ ಶೈಕ್ಷಣಿಕ ಹಾಗೂ ಸಂಶೋಧನಾ ವಲಯದ ತನ್ನ ನಿರಂತರ ಸಾಧನೆಯಿಂದಾಗಿ ವಿಶ್ವಮಟ್ಟದಲ್ಲಿ ತನ್ನ ಸ್ಥಾನದಲ್ಲಿ ಮತ್ತಷ್ಟು ಪ್ರಗತಿಕಂಡಿದೆ. ಎಆರ್‌ಡಬ್ಲ್ಯುಯು ಟ್ರ್ಯಾಕರ್ ವಿಶ್ಲೇಷಣೆಯಂತೆ, ಮಾಹೆಯು ಜಾಗತಿಕವಾಗಿ 779ನೇ ಮತ್ತು ಭಾರತದಲ್ಲಿ 7ನೇ ಸ್ಥಾನದಲ್ಲಿದೆ.
2025ನೇ ಸಾಲಿನ ಬ್ಯಾಂಕಿಂಗ್ ಗೆ ಹೋಲಿಸಿದರೆ, ಜಾಗತಿಕ ಮಟ್ಟದಲ್ಲಿ 36 ಹಾಗೂ ರಾಷ್ಟ್ರೀಯ ಮಟ್ಟದಲ್ಲಿ 3 ಸ್ಥಾನಗಳ ಮುನ್ನಡೆ ಸಾಧಿಸಿದೆ. ಶೈಕ್ಷಣಿಕ ಗುಣಮಟ್ಟ, ಸಂಶೋಧನೆ ಹಾಗೂ ಹೊಸ ಆವಿಷ್ಕಾರಗಳಿಗೆ ಮಾಹೆ ನೀಡುತ್ತಿರುವ ಪ್ರಾಮುಖ್ಯಕ್ಕೆ ಈ ರಾಂಕಿಂಗ್ ಕನ್ನಡಿಯಾಗಿದೆ ಎಂದು ಮಾಹೆಯ ಪ್ರಕಟಣೆ ತಿಳಿಸಿದೆ.
ಜ್ಞಾನದ ವಿಸ್ತರಣೆ ಹಾಗೂ ಸಮಾಜದ ಮೇಲೆ ಸಕಾರಾತ್ಮಕ ಪ್ರಭಾವ ಬೀರುವ ವಿಭಿನ್ನ ಸಂಶೋಧನೆಗಳಿಗೆ ವಿವಿ ನೀಡುತ್ತಿರುವ ಪ್ರೋತ್ಸಾಹವನ್ನು ಇದು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಮಾಹೆ ಕುಲಪತಿ ಡಾ. ಶರತ್ ಕೆ. ರಾವ್ ವಿಶ್ಲೇಷಿಸಿದರು.
ಎಆರ್‌ಡಬ್ಲ್ಯುಯು ರಾಂಕಿಂಗ್ ನಲ್ಲಿ ಕಂಡ ಈ ಮುನ್ನಡೆ ನಮ್ಮ ಬೋಧಕರು, ವಿದ್ಯಾರ್ಥಿ ಗಳು, ಸಂಶೋಧಕರು ಹಾಗೂ ಸಿಬ್ಬಂದಿಯ ಶ್ರಮದ ಫಲವಾಗಿದೆ. ಶಿಕ್ಷಣ ಮತ್ತು ಸಂಶೋಧನೆಯ ಗುಣಮಟ್ಟವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಇದು ನಮಗೆ ಪ್ರೇರಣೆ ನೀಡಿದೆ ಎಂದರು.
2026ರ ಈ ನೂತನ ಯಾಂಕಿಂಗ್ ಜಾಗತಿಕ ಮಟ್ಟದಲ್ಲಿ ಮಾಹೆ ಸಾಧಿಸುತ್ತಿರುವ ಸ್ಥಿರ ಪ್ರಗತಿಗೆ ಸಾಕ್ಷಿಯಾಗಿದೆ. ಬೋಧನೆ, ಸಂಶೋಧನೆ, ಆವಿಷ್ಕಾರ ಹಾಗೂ ಸಮಾಜಮುಖಿ ಕಾರ್ಯಗಳನ್ನು ಒಳಗೊಂಡ ಬಲಿಷ್ಠ ಶೈಕ್ಷಣಿಕ ಪರಿಸರವನ್ನು ನಿರ್ಮಿಸುವ ವಿವಿಯ ಬದ್ಧತೆಗೆ ಇದು ಕಿರೀಟವಿಟ್ಟಂತಾಗಿದೆ ಎಂದು ಮಾಹೆ ತನ್ನ ಪ್ರಕಟಣೆಯಲ್ಲಿ ಹೇಳಿದೆ.
ಜಾಗತಿಕ ಮಟ್ಟ ಬ್ಯಾಂಕಿಂಗ್ ನಲ್ಲಿ ಮೇಲಕ್ಕೇರಿದ ಮಾಹೆ: ದೇಶದಲ್ಲಿ 7ನೇ ಸ್ಥಾನ
ಮಣಿಪಾಲ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಜಾಗತಿಕ ಶೈಕ್ಷಣಿಕ ಕ್ಷೇತ್ರದಲ್ಲಿ ಮಟ್ಟದಲ್ಲಿ ಮತ್ತೊಂದು ಸಾಧನೆ ಮಾಡಿದೆ. ಶಾಂಫೈ ಬ್ಯಾಂಕಿಂಗ್ ಕನ್ಸಲ್ವೆನ್ಸಿಯ 2026ನೇ ಸಾಲಿನ ಪ್ರತಿಷ್ಠಿತ ‘ಅಕಾಡೆಮಿಕ್ ಬ್ಯಾಂಕಿಂಗ್ ಆಫ್ ವರ್ಲ್ಡ್ ಯೂನಿವರ್ಸಿಟೀಸ್’ ಪಟ್ಟಿಯಲ್ಲಿ ಮಾಹೆ 701-800ರ ಶ್ರೇಣಿಗೆ ಏರಿಕೆ ಕಂಡಿದೆ.ಕಳೆದ ಬಾರಿ 801-900ರ ಶ್ರೇಣಿಯಲ್ಲಿದ್ದು ಇದೀಗ ಶೈಕ್ಷಣಿಕ ಹಾಗೂ ಸಂಶೋಧನಾ ವಲಯದ ತನ್ನ ನಿರಂತರ ಸಾಧನೆಯಿಂದಾಗಿ ವಿಶ್ವಮಟ್ಟದಲ್ಲಿ ತನ್ನ ಸ್ಥಾನದಲ್ಲಿ ಮತ್ತಷ್ಟು ಪ್ರಗತಿಕಂಡಿದೆ.
ಎಆರ್‌ಡಬ್ಲ್ಯುಯು ಟ್ರ್ಯಾಕರ್ ವಿಶ್ಲೇಷಣೆಯಂತೆ, ಮಾಹೆಯು ಜಾಗತಿಕವಾಗಿ 779ನೇ ಮತ್ತು ಭಾರತದಲ್ಲಿ 7ನೇ ಸ್ಥಾನದಲ್ಲಿದೆ.2025ನೇ ಸಾಲಿನ ಬ್ಯಾಂಕಿಂಗ್ ಗೆ ಹೋಲಿಸಿದರೆ, ಜಾಗತಿಕ ಮಟ್ಟದಲ್ಲಿ 36 ಹಾಗೂ ರಾಷ್ಟ್ರೀಯ ಮಟ್ಟದಲ್ಲಿ 3 ಸ್ಥಾನಗಳ ಮುನ್ನಡೆ ಸಾಧಿಸಿದೆ. ಶೈಕ್ಷಣಿಕ ಗುಣಮಟ್ಟ, ಸಂಶೋಧನೆ ಹಾಗೂ ಹೊಸ ಆವಿಷ್ಕಾರಗಳಿಗೆ ಮಾಹೆ ನೀಡುತ್ತಿರುವ ಪ್ರಾಮುಖ್ಯಕ್ಕೆ ಈ ರಾಂಕಿಂಗ್ ಕನ್ನಡಿಯಾಗಿದೆ ಎಂದು ಮಾಹೆಯ ಪ್ರಕಟಣೆ ತಿಳಿಸಿದೆ.ಜ್ಞಾನದ ವಿಸ್ತರಣೆ ಹಾಗೂ ಸಮಾಜದ ಮೇಲೆ ಸಕಾರಾತ್ಮಕ ಪ್ರಭಾವ ಬೀರುವ ವಿಭಿನ್ನ ಸಂಶೋಧನೆಗಳಿಗೆ ವಿವಿ ನೀಡುತ್ತಿರುವ ಪ್ರೋತ್ಸಾಹವನ್ನು ಇದು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಮಾಹೆ ಕುಲಪತಿ ಡಾ. ಶರತ್ ಕೆ. ರಾವ್ ವಿಶ್ಲೇಷಿಸಿದರು. ಎಆರ್‌ಡಬ್ಲ್ಯುಯು ರಾಂಕಿಂಗ್ ನಲ್ಲಿ ಕಂಡ ಈ ಮುನ್ನಡೆ ನಮ್ಮ ಬೋಧಕರು, ವಿದ್ಯಾರ್ಥಿ ಗಳು, ಸಂಶೋಧಕರು ಹಾಗೂ ಸಿಬ್ಬಂದಿಯ ಶ್ರಮದ ಫಲವಾಗಿದೆ. ಶಿಕ್ಷಣ ಮತ್ತು ಸಂಶೋಧನೆಯ ಗುಣಮಟ್ಟವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಇದು ನಮಗೆ ಪ್ರೇರಣೆ ನೀಡಿದೆ ಎಂದರು.
2026ರ ಈ ನೂತನ ಯಾಂಕಿಂಗ್ ಜಾಗತಿಕ ಮಟ್ಟದಲ್ಲಿ ಮಾಹೆ ಸಾಧಿಸುತ್ತಿರುವ ಸ್ಥಿರ ಪ್ರಗತಿಗೆ ಸಾಕ್ಷಿಯಾಗಿದೆ. ಬೋಧನೆ, ಸಂಶೋಧನೆ, ಆವಿಷ್ಕಾರ ಹಾಗೂ ಸಮಾಜಮುಖಿ ಕಾರ್ಯಗಳನ್ನು ಒಳಗೊಂಡ ಬಲಿಷ್ಠ ಶೈಕ್ಷಣಿಕ ಪರಿಸರವನ್ನು ನಿರ್ಮಿಸುವ ವಿವಿಯ ಬದ್ಧತೆಗೆ ಇದು ಕಿರೀಟವಿಟ್ಟಂತಾಗಿದೆ ಎಂದು ಮಾಹೆ ತನ್ನ ಪ್ರಕಟಣೆಯಲ್ಲಿ ಹೇಳಿದೆ.








