Monday, August 24, 2026
spot_imgspot_img
spot_imgspot_img

ಹಿಂದೂ ಜಾಗರಣ ವೇದಿಕೆ‌ ಕರೆ ನೀಡಿದ ಪುತ್ತೂರು ಬಂದ್ ಗೆ ಬಿಜೆಪಿ ವ್ಯಾಪಾರ ಪ್ರಕೋಷ್ಟದ ಬೆಂಬಲ :- ಉಜ್ವಲ್ ಪ್ರಭು

- Advertisement -
- Advertisement -

ಪುತ್ತೂರು: ದರ್ಬೆಯಲ್ಲಿ ವರ್ತಕರ ಮೇಲೆ ನಡೆದ ಅಮಾನುಷ ದಾಳಿಯನ್ನು ಖಂಡಿಸಿ ಹಾಗೂ ಪೊಲೀಸ್ ಇಲಾಖೆಯ ವೈಫಲ್ಯವನ್ನು ಖಂಡಿಸಿ ಹಿಂದೂ ಜಾಗರಣ ವೇದಿಕೆ ಆ.25ರಂದು ಪುತ್ತೂರು ಬಂದ್‌ಗೆ ಕರೆ ನೀಡಿದ್ದು ಪ್ರಸ್ತುತವಾಗಿ ಬಿಜೆಪಿ ವ್ಯಾಪಾರ ಪ್ರಕೋಷ್ಠವು ಬೆಂಬಲ ಸೂಚಿಸಿದೆ. ಪುತ್ತೂರಿನಲ್ಲಿ ಇಂತಹ ಘಟನೆ ನಡೆಯಬಾರದ್ದು ಜೊತೆಗೆ ಧೈರ್ಯ ತುಂಬಬೇಕಿದ್ದ ಪೋಲಿಸ್ ಇಲಾಖೆ ಸಹ ಏಕಪಕ್ಷೀಯ ನಡೆದುಕೊಳ್ಳುವುದು ಜನರಿಗೆ ಭಯವನ್ನುಂಟು ಮಾಡಿದೆ. ಅಲ್ಲದೇ ಗೃಹ ಇಲಾಖೆಯ ವೈಪಲ್ಯವು ಎದ್ದು ಕಾಣುತ್ತದೆ.

ಪೊಲೀಸ್ ಜೀಪ್ ಒಳಗಡೆ ದಾಳಿ ಮಾಡಿದ ವ್ಯಕ್ತಿಯನ್ನು ಈ ತನಕ ಬಂದಿಸಿಲ್ಲ ಇದು ಯಾವ ನ್ಯಾಯ ಎಂದು ಬಿಜೆಪಿ ವ್ಯಾಪಾರ ಪ್ರಕೋಷ್ಠದ ಸಂಚಾಲಕ ಉಜ್ವಲ್ ಪ್ರಭು ಇಲಾಖೆಯನ್ನು ಪ್ರಶ್ನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆಗಸ್ಟ್ 25 ರಂದು ಪುತ್ತೂರು ನಗರದಲ್ಲಿ ಸ್ವಯಂಪ್ರೇರಿತ ಬಂದ್ ನಡೆಸಿ, ಘಟನೆಗೆ ವಿರೋಧ ವ್ಯಕ್ತಪಡಿಸುವಂತೆ ತಿಳಿಸಿದ್ದಾರೆ.

- Advertisement -

Related news

error: Content is protected !!