Thursday, August 27, 2026
spot_imgspot_img
spot_imgspot_img

ಪುತ್ತೂರು: ಪಿಕ್ಸೆಲ್ ಕ್ರಿಯೇಟಿವ್ಸ್ ನ ನೂತನ ಕಚೇರಿ ನಾಳೆ(ಆ.28) ಶುಭಾರಂಭ

- Advertisement -
- Advertisement -

ಪುತ್ತೂರು: ನಗರದಲ್ಲಿ ಕಳೆದ 8 ವರ್ಷಗಳಿಂದ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಜ್ವಲ್ ಎಂ.ಎಸ್. ಅವರ ಮಾಲಕತ್ವದ ಪಿಕ್ಸೆಲ್ ಕ್ರಿಯೇಟಿವ್ಸ್ ಸಂಸ್ಥೆಯ ನೂತನ ಕಚೇರಿಯು ನೆಹರು ನಗರದ ಕಲ್ಲೇಗ ದೈವಸ್ಥಾನದ ಸಮೀಪದ ಅಶ್ವಿನ್ ಕಾಂಪ್ಲೆಕ್ಸ್ ನಲ್ಲಿ ನಾಳೆ (ಆ.28) ಶುಭಾರಂಭಗೊಳ್ಳಲಿದೆ.

ಎಲ್ಇಡಿ ವಿಡಿಯೋ ವಾಲ್, ಲೈವ್ ಸ್ಟ್ರೀಮಿಂಗ್, ಮಲ್ಟಿ-ಕ್ಯಾಮೆರಾ ಮಿಕ್ಸಿಂಗ್, ಫೋಟೋಗ್ರಾಫಿ ಮತ್ತು ವಿಡಿಯೋಗ್ರಾಫಿ, ಎಡಿಟಿಂಗ್ ಸ್ಟುಡಿಯೋ, ಈವೆಂಟ್ ಮ್ಯಾನೇಜ್‌ಮೆಂಟ್ ನಲ್ಲಿ ಗುಣಮಟ್ಟದ ಸೇವೆ ನೀಡುತ್ತಾ ಬಂದಿರುವ ಸಂಸ್ಥೆಯು ಪುತ್ತೂರಿನಲ್ಲಿ ಪ್ರಸಿದ್ಧಿ ಪಡೆದಿದೆ.

ಪ್ರಸ್ತುತ ‘ಕಂಪ್ಲೀಟ್ ಇವೆಂಟ್ ಸೊಲ್ಯೂಷನ್ – ಕ್ಯಾಪ್ಚರ್, ಕ್ರಿಯೇಟ್ ಹಾಗೂ ಸೆಲೆಬ್ರೇಟ್’ ಎಂಬ ಟ್ಯಾಗ್ ಲೈನ್ ನೊಂದಿಗೆ ಸಂಸ್ಥೆಯ ನೂತನ ಸೇವೆಗಳು ಆರಂಭಗೊಳ್ಳಲಿದೆ ಎಂದು ಸಂಸ್ಥೆಯ ಮಾಲಕ ಪ್ರಜ್ವಲ್ ಎಂ.ಎಸ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!