- Advertisement -
- Advertisement -




ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ನಿವಾಸದಲ್ಲಿ ಶಾಲಾ ಮಕ್ಕಳೊಂದಿಗೆ ರಕ್ಷಾಬಂಧನ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿನಿಯರು ಪ್ರಧಾನಿಯನ್ನು ಭೇಟಿಯಾಗಿ ಪ್ರೀತಿಯಿಂದ ರಾಖಿ ಕಟ್ಟಿ ಶುಭ ಹಾರೈಸಿದರು.
ರಾಖಿ ಕಟ್ಟಲು ಬಂದ ಮಕ್ಕಳನ್ನು ಪ್ರಧಾನಿ ಮೋದಿ ಆತ್ಮೀಯವಾಗಿ ಬರಮಾಡಿಕೊಂಡು, ಅವರೊಂದಿಗೆ ಹರಟೆ ಹೊಡೆದರು. ರಾಖಿ ಕಟ್ಟುವ ವೇಳೆ ಮಕ್ಕಳಿಗೆ ಹೈ-ಫೈವ್ ನೀಡಿ, ಅವರ ವಿದ್ಯಾಭ್ಯಾಸ ಹಾಗೂ ಯೋಗಕ್ಷೇಮದ ಬಗ್ಗೆ ವಿಚಾರಿಸಿದರು.
ವಿದ್ಯಾರ್ಥಿನಿಯೊಬ್ಬಳು ರಾಖಿ ಕಟ್ಟಿದ ನಂತರ ಮೋದಿ ಅವಳ ತಲೆ ಮೇಲೆ ಕೈಯಿಟ್ಟು ಆಶೀರ್ವದಿಸಿದರು. ಮಕ್ಕಳೊಂದಿಗೆ ನಗುನಗುತ್ತಾ ಸಂವಾದ ನಡೆಸಿ, ಪ್ರತಿಯೊಬ್ಬರ ಬೆನ್ನು ತಟ್ಟಿ ಪ್ರೋತ್ಸಾಹಿಸಿದರು.
- Advertisement -








