- Advertisement -
- Advertisement -
ಉಡುಪಿ: ವಿದ್ಯಾರ್ಥಿಗಳ ಅಧ್ಯಯನ ಹಾಗೂ ಸಂಶೋಧನೆಗಾಗಿ ಕುಂದಾಪುರ ತಾಲೂಕು ಅಂಪಾರು ಮೂಡುಬಗೆ ವಿವೇಕ ನಗರದ ದಿವಂಗತ ಮೋಹನ ರಾವ್ ಅವರ ಹೆಂಡತಿ ದಿವಂಗತ ಶಶಿಕಲಾ(67) ದೇಹವನ್ನು ಅವರ ಸ್ವ-ಇಚ್ಛೆಯಂತೆ ಕುಟುಂಬದವರು ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದ ಶರೀರ ರಚನಾ ವಿಭಾಗಕ್ಕೆ ದಾನ ಮಾಡಿದ್ದಾರೆ.
ಎಸ್.ಡಿ.ಎಂ. ವಿದ್ಯಾಸಂಸ್ಥೆಗೆ ನೀಡಿರುವ ಈ ಶ್ರೇಷ್ಠ ಕೊಡುಗೆ ಇತರರಿಗೂ ಮಾದರಿಯಾಗಿದೆ, ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಕಾಲೇಜಿನ ಪ್ರಾಂಶುಪಾಲೆ ಡಾ ಮಮತಾ ಕೆ.ವಿ.ಯವರು ಪ್ರಾರ್ಥಿಸಿ, ಶರೀರ ರಚನಾ ವಿಭಾಗ ಸಂಶೋಧನೆಗಾಗಿ ವಿಭಾಗದ ಮುಖ್ಯಸ್ಥ ಡಾ.ಕೃಷ್ಣಮೂರ್ತಿ ಎನ್. ಅವರಿಗೆ ದೇಹವನ್ನು ಹಸ್ತಾಂತರಿಸಿದರು.
- Advertisement -







