Wednesday, September 2, 2026
spot_imgspot_img
spot_imgspot_img

ವಿಟ್ಲ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ.), ವಿಟ್ಲ ಇದರ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯ ಪತ್ರಿಕಾಗೋಷ್ಠಿ

- Advertisement -
- Advertisement -

ವಿಟ್ಲ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ.), ವಿಟ್ಲ ಇದರ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯ ಬಗ್ಗೆ ಸಂಘದ ಸಭಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಯಿತು.

ಪತ್ರಿಕಾ ಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ನರ್ಸಪ್ಪ ಪೂಜಾರಿ ಯನ್ ಮಾತನಾಡಿ’ ವಿಟ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ.ವಿಟ್ಲ ಇದರ 2025-26 ನೇ ಸಾಲಿನ ವಾರ್ಷಿಕ ವರದಿ ಮಹಾಸಭೆಯು ಇದೇ ಸೆ.6 ಆದಿತ್ಯವಾರ ಬೆಳಗ್ಗೆ 11 ಗಂಟೆಗೆ ವಿಠಲ ಪದವಿಪೂರ್ವ ಕಾಲೇಜಿನ ‘ಸುವರ್ಣ ರಂಗ ಮಂದಿರದಲ್ಲಿ ನಡೆಯಲಿದೆ. ಸಭೆಯಲ್ಲಿ 2025-26 ನೇ ಸಾಲಿನ ವರದಿ, 2025-26 ನೇ ಸಾಲಿನ ಜಮಾ-ಖರ್ಚು ವ್ಯಾಪಾರ ಲಾಭ ನಷ್ಟ ಮತ್ತು ಆಸ್ತಿ ಜವಾಬ್ದಾರಿ ತಖ್ತೆಗಳ ಮಂಜೂರಾತಿ, 2025-26ನೇ ಸಾಲಿನ ಲೆಕ್ಕ ಪರಿಶೋಧನಾ ವರದಿಯ ಮಂಜೂರಾತಿ, 2026-27 ನೇ ಸಾಲಿನ ವರ್ಷದ ಬಾಬ್ತು ತಯಾರಿಸಲಾದ ಅಂದಾಜು ಆಯ ವ್ಯಯ ಪಟ್ಟಿ ಮಂಜೂರಾತಿ ಲೆಕ್ಕ ಪರಿಶೋಧಕರ ಆಯ್ಕೆ ಮುಂತಾದ ವಿಚಾರಗಳ ಬಗ್ಗೆ ಸಭೆ ನಡೆಯಲಿದೆ.

ಅದಲ್ಲದೆ, ಸಂಘವು “ಎ” ತರಗತಿ ಸದಸ್ಯರು ಇದ್ದು ರೂ.3,90,03,274/-ಪಾಲು ಬಂಡವಾಳ ಹೊಂದಿದೆ. ಸಂಘದ ಒಟ್ಟು ಠೇವಣಾತಿ ಮೊತ್ತವು ದಿನಾಂಕ 31-03-2026ಕ್ಕೆ ರೂ. 39,60,16,426.02 ಆಗಿರುತ್ತದೆ. ವರದಿ ವರ್ಷದಲ್ಲಿ 9.76 % ಠೇವಣಿ ಅಭಿವೃದ್ಧಿಯಾಗಿರುತ್ತದೆ. ಸದಸ್ಯರ ಸಾಲ ರೂ. 41,61,06,966.00 ಇದೆ. ಸಂಘವು 2025-26ನೇ ಸಾಲಿನಲ್ಲಿ ರೂ. 238.99 ಕೋಟಿ ವ್ಯವಹಾರ ಮಾಡಿ ಎಲ್ಲಾ ಖರ್ಚುಗಳನ್ನು ಕಳೆದು ರೂ. 1,47,14,602.06/- ರಷ್ಟು ಲಾಭ ಗಳಿಸಿದ್ದು, ವರದಿ ಸಾಲಿನಲ್ಲಿ ಸಂಘವನ್ನು ಎ ತರಗತಿಯಲ್ಲಿ ವರ್ಗೀಕರಿಸಲಾಗಿದೆ ಎಂದರು. ಮಹಾಸಭೆಗೆ ಸಂಘದ ಎಲ್ಲಾ ಸದಸ್ಯರು ಭಾಗವಹಿಸಿ ಯಶಸ್ವಿಗೊಳಿಸಿಕೊಡುವಂತೆ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷರು ಶ್ರೀಮತಿ ಮಂಜುಳಾ , ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭುವನೇಶ್ವರ ಬಿ. ನಿರ್ದೇಶಕರುಗಳಾದ ಮಹಾಬಲೇಶ್ವರ ಭಟ್ ಎ., ಉದಯಕುಮಾರ್‍ ಯನ್ , ಸದಾನಂದ ಗೌಡ ಸೇರಾಜೆ, ಮೋಹನದಾಸ್ ಉಕ್ಕುಡ, ರಾಘವೇಂದ್ರ ಪೈ ಎ, ದಿನೇಶ ಕೆ, ಶ್ರೀಮತಿ ಸಂಧ್ಯಾ ಮೋಹನ, ವಾಸು ಸಿ ಹೆಚ್, ಹರೀಶ್ ನಾಯ್ಕ, ತೀರ್ಥರಾಮ, ಉಪಸ್ಥಿತರಿದ್ದರು.

- Advertisement -

Related news

error: Content is protected !!