Wednesday, September 2, 2026
spot_imgspot_img
spot_imgspot_img

ಕುಡಿದು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದವನಿಗೆ 50 ಸಸಿ ನೆಡುವ ಶಿಕ್ಷೆ!

- Advertisement -
- Advertisement -

ಚಿಕ್ಕೋಡಿ: ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಿ ಅವಾಚ್ಯ ಶಬ್ದಗಳಿಂದ ಸಾರ್ವಜನಿಕರನ್ನು ನಿಂದಿಸಿದ ಪ್ರಕರಣದಲ್ಲಿ ಚಿಕ್ಕೋಡಿ ಪ್ರಥಮ ಹೆಚ್ಚುವರಿ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಲಯ ವಿನೂತನ ಶಿಕ್ಷೆ ವಿಧಿಸಿದೆ.

ಯಕ್ಸಂಬಾ ಪಟ್ಟಣದ ಅನಿಲ್ ಪೂಜಾರಿ ಎಂಬಾತ ಪ್ರಕರಣದ ವಿಚಾರಣೆ ವೇಳೆ ಅಪರಾಧ ಒಪ್ಪಿಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ 1,000 ರೂ. ದಂಡ ವಿಧಿಸಿದೆ. ಇದರೊಂದಿಗೆ ಪರಿಸರ ಕಾಳಜಿಗೆ ಒತ್ತು ನೀಡುವ ನಿಟ್ಟಿನಲ್ಲಿ ಒಟ್ಟು 50 ಸಸಿ ನೆಡುವಂತೆ ಆದೇಶಿಸಿದೆ.

ಸದಲಗಾ ಪೊಲೀಸ್ ಠಾಣೆ ಆವರಣದಲ್ಲಿ 25 ಸಸಿ ಹಾಗೂ ಚಿಕ್ಕೋಡಿ ನ್ಯಾಯಾಲಯದ ಆವರಣದಲ್ಲಿ 25 ಸಸಿ ನೆಡುವಂತೆ ನ್ಯಾಯಾಲಯ ಸೂಚಿಸಿದೆ. ನ್ಯಾಯಾಲಯದ ಆದೇಶದಂತೆ ಸಸಿ ನೆಡಲು ವಿಫಲವಾದಲ್ಲಿ 30 ದಿನಗಳ ಕಾರಾಗೃಹ ಶಿಕ್ಷೆ ಅನುಭವಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪರಿಸರ ಸಂರಕ್ಷಣೆಯ ಸಂದೇಶ ಸಾರುವ ಮೂಲಕ ನ್ಯಾಯಾಲಯ ನೀಡಿರುವ ಈ ವಿನೂತನ ತೀರ್ಪು ಗಮನ ಸೆಳೆದಿದೆ.

- Advertisement -

Related news

error: Content is protected !!