




ಪುತ್ತೂರು ಬಿಜೆಪಿ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ರವರು ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡರು. ಬೀರಮಲೆ ಬೆಟ್ಟದಲ್ಲಿರುವ ಪ್ರಜ್ಞಾ ಆಶ್ರಮ ಬೌದ್ಧಿಕ ದಿವ್ಯಾಂಗರ ವಸತಿಯುತ ಕೇಂದ್ರದಲ್ಲಿ ಮಕ್ಕಳೊಂದಿಗೆ ಹುಟ್ಟುಹಬ್ಬದ ಸಂಭ್ರಮವನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಆಶ್ರಮದಲ್ಲಿದ್ದ ಮಕ್ಕಳೊಂದಿಗೆ ಕೇಕ್ ಕತ್ತರಿಸಿ, ಅವರಿಗೆ ರಕ್ಷೆಯನ್ನು ಕಟ್ಟಿದ ದಯಾನಂದ ಶೆಟ್ಟಿಯವರು ಮಕ್ಕಳಿಗೆ ಹಣ್ಣು-ಹಂಪಲು ಹಂಚಿದರು. ಮಕ್ಕಳೊಂದಿಗೆ ಸಮಯ ಕಳೆದು, ಅವರಿಗೆ ಪ್ರೀತಿ-ಆತ್ಮವಿಶ್ವಾಸ ತುಂಬಿದರು.

ಕಾರ್ಯಕ್ರಮದಲ್ಲಿ ಆಶ್ರಮದ ವಿಶೇಷ ಚೇತನ ಮಕ್ಕಳ ಆರೈಕೆ ಮತ್ತು ಸೇವೆಯಲ್ಲಿ ತೊಡಗಿರುವ ಪಾಲಕರಾದ ಅಣ್ಣಪ್ಪ ದಂಪತಿಗಳನ್ನು ಶಾಲು ಹಾಕಿ ಗೌರವಿಸಿ, ಫಲ-ಪುಷ್ಪ ನೀಡಿ ಗೌರವಿಸಿದರು.
ಈ ಸಂದರ್ಭ ದಲ್ಲಿ ಮಾತನಾಡಿದ ದಯಾನಂದ ಶೆಟ್ಟಿ ಉಜಿಮಾರು, ಎಲ್ಲರೂ ಸೇರಿ ನನ್ನ ಹುಟ್ಟುಹಬ್ಬ ಈ ಮಕ್ಕಳ ಜೊತೆ ಆಚರಿಸಿರುವುದು ಅದು ಭಗವಂತನ ಇಚ್ಛೆ. ನಿಮ್ಮೆಲ್ಲರ ಪ್ರೀತಿ ಸದಾ ಹೀಗೆ ಇದ್ದು ಸಂಘಟನೆ ಬೆಳೆಯುವುದಕ್ಕೆ ಶಕ್ತಿಯಾಗಲಿ ಎಂದು ಹೇಳಿದರು.



ಬಿಜೆಪಿ ಮುಖಂಡ ಸಾಜ ರಾಧಾಕೃಷ್ಣ ಆಳ್ವ ಮಾತನಾಡಿ ಎಲ್ಲಾ ಕಾರ್ಯಕರ್ತರನ್ನು ಒಗ್ಗೂಡಿಸಿ, ಪಕ್ಷದ ಎಲ್ಲಾ ಕೆಲಸಗಳನ್ನು ಸುಲಲಿತವಾಗಿ ಚಾಕಚಕ್ಯತೆಯಿಂದ ಮಾಡುವ ನಿಷ್ಠಾವಂತ ಕಾರ್ಯಕರ್ತ ಪುತ್ತೂರು ಭಾಜಪ ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ದಯಾನಂದ ಶೆಟ್ಟಿ ಉಜಿರೆಮಾರ್ ರವರಿಗೆ ಇನ್ನಷ್ಟು ಶಕ್ತಿಯನ್ನು ಭಗವಂತ ಅನುಗ್ರಹಿಸಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು , ಮತ್ತು ದಯಾನಂದ ಶೆಟ್ಟಿ ಯವರ ಸ್ನೇಹಿತರು ಭಾಗವಹಿಸಿದರು. ಶೈಲೇಶ್ ಶೆಟ್ಟಿ ಧರ್ಮನಗರ ಕಾರ್ಯಕ್ರಮ ನಿರೂಪಿಸಿದರು.








