Thursday, September 3, 2026
spot_imgspot_img
spot_imgspot_img

ಸೆ.10) ವಿಟ್ಲ ಗ್ರಾಮೀಣ ಸಹಕಾರಿ ಸಂಘ ನಿಯಮಿತ 2025-26 ನೇ ಸಾಲಿನ ವಾರ್ಷಿಕ ಮಹಾಸಭೆ

- Advertisement -
- Advertisement -

ವಿಟ್ಲ ಗ್ರಾಮೀಣ ಸಹಕಾರಿ ಸಂಘ ನಿಯಮಿತ 2025-26 ನೇ ಸಾಲಿನ ವಾರ್ಷಿಕ ಮಹಾಸಭೆಯು 10-9-2026ನೇ ಗುರುವಾರದಂದು ಪೂರ್ವಾಹ್ನ 11:00ಕ್ಕೆ ವಿಟ್ಲದ ಶಾಂತಿನಗರದಲ್ಲಿರುವ “ಅಕ್ಷಯ ಸಮುದಾಯ ಭವನ”ದಲ್ಲಿ ಬ್ಯಾಂಕ್‌ನ ಅಧ್ಯಕ್ಷ ಹೆಚ್‌. ಜಗನ್ನಾಥ ಸಾಲಿಯಾನ್‌ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ವಾರ್ಷಿಕ ಮಹಾಸಭೆಯಲ್ಲಿ ಮಹಾಸಭೆಯ ನೋಟೀಸನ್ನು ಓದಿ ದಾಖಲಿಸುವುದು, ಕಳೆದ ವರ್ಷದ ಮಹಾಸಭೆಯ ನಡವಳಿಕೆಗಳನ್ನು ಓದಿ ದಾಖಲಿಸುವುದು, 2024-25ನೇ ವರ್ಷದ ಆಡಳಿತ ಮಂಡಳಿ ವರದಿ ಮಂಜೂರಾತಿ, 2025-26ನೇ ವರ್ಷದ ಲೆಕ್ಕ ಪರಿಶೋಧನಾ ವರದಿ ಮಂಜೂರಾತಿ, 2025-26ನೇ ವರ್ಷದ ನಿವ್ವಳ ಲಾಭ ವಿಂಗಡಿಸುವುದು, 2025-26ನೇ ವರ್ಷದಲ್ಲಿ ಬಜೆಟ್‌ ಮೀರಿ ಖರ್ಚಾದ ವೆಚ್ಚಗಳ ಮಂಜೂರಾತಿ, 2026-27ನೇ ವರ್ಷದ ಅಂದಾಜು ಮುಂಗಡ ಪತ್ರಗಳ ಮಂಜೂರಾತಿ, 2026-27ನೇ ಸಾಲಿಗೆ ಬ್ಯಾಂಕ್‌ನ ಲೆಕ್ಕ ಪರಿಶೋಧನೆಗೆ ಲೆಕ್ಕ ಪರಿಶೋಧಕರನ್ನು ನೇಮಿಸುವ ಕುರಿತು ಮುಂತಾದ ವಿಚಾರಗಳ ಬಗ್ಗೆ ಸಭೆ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಸೂಚನೆ: ಸದಸ್ಯರಿಗೆ ಮಹಾಸಭೆಗೆ ಹಾಜರಾಗಲು ವಿಟ್ಲದ ಮಂಗಳೂರು ರಸ್ತೆಯಲ್ಲಿರುವ ಲಯನ್ಸ್ ಕ್ಲಬ್ ಬಸ್ ತಂಗುದಾಣದ ಬಳಿಯಿಂದ ವಾಹನದ ವ್ಯವಸ್ಥೆ ಇದೆ. (ಅನಂತ ಸದನದ ಹಿಂಬದಿಯಿಂದ)

- Advertisement -

Related news

error: Content is protected !!