- Advertisement -
- Advertisement -





ವಿಟ್ಲ ಅಕ್ಷಯ ಸೌಹಾರ್ದ ಸಹಕಾರಿ ಸಂಘ ನಿಯಮಿತ(ರಿ) 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ.5 ಶನಿವಾರದಂದು ಪೂರ್ವಾಹ್ನ 11ಗಂಟೆಗೆ ಅಧ್ಯಕ್ಷರಾದ ಶ್ರೀ ಕೆ. ಮೋನಪ್ಪ ಗೌಡ ಶಿವಾಜಿನಗರ ಇವರ ಅಧ್ಯಕ್ಷತೆಯಲ್ಲಿ ” ಅಕ್ಷಯ” ಗೌಡ ಸಮುದಾಯ ಭವನ ಶಾಂತಿನಗರ , ವಿಟ್ಲ ಇಲ್ಲಿ ನಡೆಯಲಿದೆ.

ವಾರ್ಷಿಕ ಮಹಾಸಭೆಯಲ್ಲಿ, ಮಹಾಸಭೆಯ ತಿಳುವಳಿಕೆ ಪತ್ರ ಓದಿ ದಾಖಲಿಸುವುದು, 2025-26ನೇ ಸಾಲಿನ ವಾರ್ಷಿಕ ವರದಿ,2025-26ನೇ ವರ್ಷದ ಲೆಕ್ಕಪತ್ರಗಳ ಮಂಡನೆ , 2025-26ನೇ ವರ್ಷದ ಲೆಕ್ಕ ಪರಿಶೋಧನಾ ವರದಿ ಮಂಜೂರಾತಿ ಹಾಗೂ ನ್ಯೂನ್ಯತೆಗಳ ಸಮಾಜಾಯಿಸಿಕೆ ವಿವರ, 2025-26ನೇ ವರ್ಷದಲ್ಲಿ ಅಂದಾಜು ಬಜೆಟ್ ಗಿಂತ ಜಾಸ್ತಿ ಖರ್ಚಾದ ಐವೇಜುಗಳ ಮಂಜೂರಾತಿ, 2026-27ನೇ ವರ್ಷಕ್ಕೆ ಅಂದಾಜು ಬಜೆಟ್ ಮಂಜೂರಾತಿ, 2026-27ನೇ ವರ್ಷಕ್ಕೆ ಲೆಕ್ಕ ಪರಿಶೋಧಕರ ಆಯ್ಕೆ ವಿಚಾರ, ಅಧ್ಯಕ್ಷರ ಅನುಮತಿಯೊಂದಿಗೆ ಇತರ ವಿಷಯಗಳ ಬಗ್ಗೆ ಸಭೆ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
- Advertisement -








