Saturday, September 5, 2026
spot_imgspot_img
spot_imgspot_img

ವಿಟ್ಲ ಅಕ್ಷಯ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿಯಮಿತ(ರಿ) 2025-26ನೇ ಸಾಲಿನ ವಾರ್ಷಿಕ ಮಹಾಸಭೆ

- Advertisement -
- Advertisement -

ದೀಪ ಪ್ರಜ್ವಲಿಸಿ ಉದ್ಘಾಟಿಸಿದ ಸಂಘದ ಹಿರಿಯ ಸದಸ್ಯ ಮದನಗೌಡ ಮುಂಡ್ರಬೈಲು

ವಿಟ್ಲ ಅಕ್ಷಯ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿಯಮಿತ(ರಿ) 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ.5 ಶನಿವಾರದಂದು ಪೂರ್ವಾಹ್ನ 11ಗಂಟೆಗೆ ” ಅಕ್ಷಯ” ಗೌಡ ಸಮುದಾಯ ಭವನ ಶಾಂತಿನಗರ , ವಿಟ್ಲ ಇಲ್ಲಿ ನಡೆಯಿತು. ದೀಪ ಪ್ರಜ್ವಲನೆಯನ್ನು ಸಂಘದ ಹಿರಿಯ ಸದಸ್ಯರಾದ ಮದನಗೌಡ ಮುಂಡ್ರಬೈಲು ನೆರವೇರಿಸಿದರು.

ಸಭಾಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಕೆ. ಮೋನಪ್ಪ ಗೌಡ ಶಿವಾಜಿನಗರ ಮಾತನಾಡಿ ಸಂಘವು ಅರ್ಧಿಕ ವರ್ಷದಲ್ಲಿ ಒಟ್ಟು 1276 ‘A’ ತರಗತಿ, 34 ‘B’ ತರಗತಿ ಹಾಗೂ 14 ‘C’ ತರಗತಿ ಸದಸ್ಯರಿದ್ದು ಒಟ್ಟು ಪಾಲು ಬಂಡವಾಳ ರೂ.34,19,200.00 ಆಗಿದ್ದು ಸದಸ್ಯರ ಒಟ್ಟು ಠೇವಣಿಯು ರೂ.2,55,25,305.75 ಆಗಿರುತ್ತದೆ ಹಾಗೂ ವರ್ಷಾಂತ್ಯಕ್ಕೆ ಸದಸ್ಯರ ಒಟ್ಟು ಹೊರಬಾಕಿ ಸಾಲವು ರೂ. 2,00,09,082.00 ಆಗಿದ್ದು 2025-26ನೇ ಸಾಲಿನಲ್ಲಿ 12 ಆಡಳಿತ ಮಂಡಳಿಯ ಸಭೆಯನ್ನು ನಡೆಸಲಾಗಿದೆ. ಸಂಘವು 2025-26ನೇ ವರ್ಷದಲ್ಲಿ ಉತ್ತಮ ವ್ಯವಹಾರವನ್ನು ನಡೆಸಿರುತ್ತದೆ ಎಂದು ತಿಳಿಸಿದರು.

ಸಂಘದ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿತಿನ್ ಕುಮಾರ್‍ ಲೆಕ್ಕಪತ್ರ ಮಂಡಿಸಿ, ವೆಂಕಪ್ಪ ಗೌಡ ಅಜೇರುಮಜಲು ವಾರ್ಷಿಕ ವರದಿ ಓದಿದರು.

ಮಹಾಸಭೆಯಲ್ಲಿ ಸಂಘದ ನಿದೇರ್ಶಕರಾದ ಮೋಹನ ಗೌಡ ಕಾಯರ್‍ ಮಾರ್‍, ಕೆ. ಲಿಂಗಪ್ಪ ಗೌಡ ಅಳಿಕೆ , ಕುಶಾಲಪ್ಪ ಗೌಡ ಇರಂದೂರು , ಶ್ರೀಮತಿ ಅಮಿತಾ ಕೃಷ್ಣ ಕೆ.ಜಿ. ಕುಡಿಪ್ಪಾಡಿಗುತ್ತು, ಬಾಲಕೃಷ್ಣ ಗೌಡ ಪೊನ್ನೆತ್ತಡಿ, ಕೆ.ಜಿ ಚಂದ್ರ ಶೇಖರ ಗಿರಿನಿವಾಸ , ಎನ್ ಜಗದೀಶ್ಚಂದ್ರ ನಾಯ್ತೋಟ್ಟು , ಚಿದಾನಂದ ಪೆಲತ್ತಿಂಜ , ಕಾನೂನು ಸಲಹೆಗಾರರಾದ ಮಹೇಶ್ ಅಳಿಕೆ ಹಾಗೂ ಸಿಬ್ಬಂದಿಗಳು ಮತ್ತು ಸಲಹಾಸಮಿತಿ ಸದಸ್ಯರು ಉಪಸ್ಥಿತರಿದ್ದರು

ಶ್ರೀಮತಿ ವಿದ್ಯಾ ಸೇರಾಜೆ ಪ್ರಾರ್ಥಿಸಿ, ಉಪಾಧ್ಯಕ್ಷರಾದ ಮಹಾಬಲ ಗೌಡ ಅಡ್ಡಾಳಿ ಸ್ವಾಗತಿಸಿದರು, ನಿರ್ದೇಶಕಿ ಶ್ರೀಮತಿ ಧರ್ಮಾವತಿ ಪಿ.ಬಿ. ದೇವರಮನೆ ವಂದಿಸಿದರು.

- Advertisement -

Related news

error: Content is protected !!