- Advertisement -
- Advertisement -

ಮೂಡುಬಿದಿರೆ: ಲಾರಿಯೊಂದು ಬ್ರೇಕ್ ಫೇಲ್ಆಗಿ ಹಿಮ್ಮುಖವಾಗಿ ಚಲಿಸಿ ಸಮೀಪದಲ್ಲಿದ್ದ ಅಂಗಡಿಗೆ ನುಗ್ಗಿದ ಘಟನೆ ಮೂಡುಬಿದಿರೆ ತಾಲೂಕಿನ ತೋಡಾರು ಕೊಡಮಣಿತ್ತಾಯ ದ್ವಾರದ ಬಳಿ ರವಿವಾರ ನಡೆದಿದೆ.ಇಲ್ಲಿನ ಯೆನೆಪೊಯ ಕಾಲೇಜಿನ ಗೇಟ್ ನಿಂದ ಹೊರಬಂದ ಲಾರಿ ಮೇಲಿನ ಮುಖ್ಯರಸ್ತೆಗೆ ಪ್ರವೇಶಿಸುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.
ಬ್ರೇಕ್ ವೈಫಲ್ಯಕ್ಕೀಡಾಗಿದ್ದರಿಂದ ಲಾರಿಯು ಚಾಲಕ ನಿಯಂತ್ರಣ ತಪ್ಪಿ ಹಿಮ್ಮುಖವಾಗಿ ಚಲಿಸಿ ಪಕ್ಕದಲ್ಲಿ ಅಂಗಡಿಗೆ ನುಗ್ಗಿದೆ. ಇದರಿಂದ ಅಂಗಡಿಗೆ ಹಾನಿ ಸಂಭವಿಸಿದೆ ಎಂದು ತಿಳಿದುಬಂದಿದೆ.
- Advertisement -








