Tuesday, September 8, 2026
spot_imgspot_img
spot_imgspot_img

ರಾಜ್ಯದಲ್ಲಿ ಐಪಿಎಸ್‌ ಅಧಿಕಾರಿಗಳ ವರ್ಗಾವಣೆ: ಮಂಗಳೂರಿಗೆ ಹೊಸ ಡಿಸಿಪಿಯಾಗಿ ಸ್ಯಾಮ್ ವರ್ಗೀಸ್

- Advertisement -
- Advertisement -

ಬೆಂಗಳೂರು: ರಾಜ್ಯ ಸರ್ಕಾರ ಹಲವು ಐಪಿಎಸ್‌ ಅಧಿಕಾರಿಗಳನ್ನು ವರ್ಗಾವಣೆ ಹಾಗೂ ವಿವಿಧ ಹುದ್ದೆಗಳಿಗೆ ನೇಮಕ ಮಾಡಿ ಸೆಪ್ಟೆಂಬರ್‌ 7ರಂದು ಅಧಿಸೂಚನೆ ಹೊರಡಿಸಿದೆ.

ಇದರಂತೆ ಮಂಗಳೂರು ನಗರಕ್ಕೆ ಹೊಸ ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ನೇಮಕಗೊಂಡಿದ್ದಾರೆ.2014ನೇ ಬ್ಯಾಚ್‌ನ ಐಪಿಎಸ್‌ ಅಧಿಕಾರಿ ಅನಿತಾ ಭೀಮಪ್ಪ ಹಡ್ಡಣ್ಣವರ್ ಅವರನ್ನು ಬೆಂಗಳೂರಿನ ನೈಋತ್ಯ ವಿಭಾಗದ ಡಿಸಿಪಿ ಹುದ್ದೆಯಿಂದ ವರ್ಗಾವಣೆ ಮಾಡಿ, ತಕ್ಷಣದಿಂದ ಜಾರಿಗೆ ಬರುವಂತೆ ಅಪರಾಧ ತನಿಖಾ ದಳದ (CID) ಪೊಲೀಸ್ ಅಧೀಕ್ಷಕರಾಗಿ ನೇಮಕ ಮಾಡಲಾಗಿದೆ. ಅವರು ಸಮ್ ವರ್ಗೀಸ್ ಅವರ ಸ್ಥಾನವನ್ನು ವಹಿಸಲಿದ್ದಾರೆ.

2018ನೇ ಬ್ಯಾಚ್‌ನ ಐಪಿಎಸ್‌ ಅಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಬೆಂಗಳೂರು ನಗರ ಗುಪ್ತಚರ ವಿಭಾಗದ ಡಿಸಿಪಿಯಾಗಿ ನೇಮಕ ಮಾಡಲಾಗಿದೆ. ಈ ಹುದ್ದೆ ಸದ್ಯ ಖಾಲಿಯಿತ್ತು.2020ನೇ ಬ್ಯಾಚ್‌ನ ಐಪಿಎಸ್‌ ಅಧಿಕಾರಿ ಲಕ್ಷ್ಮಿ ಗಣೇಶ್ ಕೆ. ಅವರನ್ನು ಬೆಂಗಳೂರು ನೈಋತ್ಯ ವಿಭಾಗದ ಡಿಸಿಪಿಯಾಗಿ ನೇಮಕ ಮಾಡಲಾಗಿದ್ದು, ಅನಿತಾ ಭೀಮಪ್ಪ ಹಡ್ಡಣ್ಣವರ್ ಅವರ ಸ್ಥಾನವನ್ನು ಅವರು ತುಂಬಲಿದ್ದಾರೆ.

ಇದೇ ವೇಳೆ 2022ನೇ ಬ್ಯಾಚ್‌ನ ಐಪಿಎಸ್‌ ಅಧಿಕಾರಿ ಸಮ್ ವರ್ಗೀಸ್ ಅವರನ್ನು ಬೆಂಗಳೂರಿನ CID ಪೊಲೀಸ್ ಅಧೀಕ್ಷಕ ಹುದ್ದೆಯಿಂದ ವರ್ಗಾವಣೆ ಮಾಡಿ, ತಕ್ಷಣದಿಂದ ಜಾರಿಗೆ ಬರುವಂತೆ ಮಂಗಳೂರು ನಗರ ಪೊಲೀಸ್ ಕಮಿಷನರೇಟ್‌ನ ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಹುದ್ದೆಗೆ ನೇಮಕ ಮಾಡಲಾಗಿದೆ

- Advertisement -

Related news

error: Content is protected !!