Wednesday, September 9, 2026
spot_imgspot_img
spot_imgspot_img

ವಿಟ್ಲ: ಜೂಡೋ, ಕರಾಟೆ, ಟೈಕ್ವಾಂಡೋದಲ್ಲಿ ವಿದ್ಯಾರ್ಥಿಗಳ ಸಾಧನೆ; ರಾಜ್ಯಮಟ್ಟಕ್ಕೆ ಆಯ್ಕೆ

- Advertisement -
- Advertisement -

ವಿಟ್ಲ: ಶಿಕ್ಷಣ ಇಲಾಖೆಯ ವತಿಯಿಂದ ಪಿಎಂಶ್ರೀ ವಿಟ್ಲ ಶಾಲೆಯಲ್ಲಿ ನಡೆದ ಜೂಡೋ ಹಾಗೂ ಟೈಕ್ವಾಂಡೋ ಜಿಲ್ಲಾ ಮಟ್ಟದ ಪಂದ್ಯಾಟದಲ್ಲಿ ಮತ್ತು ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ನಡೆದ ಕರಾಟೆ ಜಿಲ್ಲಾ ಮಟ್ಟದ ಪಂದ್ಯಾಟದಲ್ಲಿ ಮಾಧವ ಅಳಿಕೆ ಅವರ ನೇತೃತ್ವದಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿ ಪ್ರಥಮ ಸ್ಥಾನ ಗಳಿಸುವ ಮೂಲಕ ರಾಜ್ಯಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ.

ಜೂಡೋ ವಿಭಾಗದಲ್ಲಿ ಸಂತ ರೀಟಾ ಶಾಲೆ ವಿಟ್ಲದ ಮೌಷ್ಮಿ ಶೆಟ್ಟಿ, ಸುವಿಕ್ಷ್ ರೈ ಹಾಗೂ ಮಹಮ್ಮದ್ ರಾಜ್ವಿನ್, ವಿಟ್ಲ ಜೇಸಿಸ್‌ನ ಧನ್ವಿನ್ ಹಾಗೂ ಧನ್ವಿ, ಮಾದರಿ ಶಾಲೆ ವಿಟ್ಲದ ಶಿಶೀರ್ ಹಾಗೂ ರಿಷಿಕ್ ಆಳ್ವ, ಹೊರೈಝನ್ ಮೇಗಿನಪೇಟೆಯ ಶಾಹಿದ್, ಮೂವಾಝ್ ಹಾಗೂ ಹಿತಶ್ರಿ, ಪಡಿಬಾಗಿಲು ಶಾಲೆಯ ಸ್ತುತಿ, ಬಾಲವಿಕಾಸದ ಸಾನಿಧ್ಯ, ಮಾಯಿ ದೇವುಸ್ ಶಾಲೆಯ ಹಂಶಿಕಾ, ಓಜಾಲಾ ಶಾಲೆಯ ಸಂಭ್ರಮ್, ಸತ್ಯಸಾಯಿ ಅಳಿಕೆಯ ಶಿಜಾನ್ಯ ಹಾಗೂ ಒಡಿಯೂರು ಶಾಲೆಯ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಕರಾಟೆ ವಿಭಾಗದಲ್ಲಿ ಓಜಾಲಾ ಶಾಲೆಯ ಹಂಶಿಕಾ ಹಾಗೂ ಮಾಯಿ ದೇವುಸ್ ಶಾಲೆಯ ಸಾನಿಧ್ಯ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಟೈಕ್ವಾಂಡೋ ವಿಭಾಗದಲ್ಲಿ ಸತ್ಯಸಾಯಿ ಅಳಿಕೆಯ ಪ್ರತಿಕ್ ಶೆಟ್ಟಿ, ವಿಟ್ಲ ಜೇಸಿಸ್‌ನ ಮನಸ್ವಿ, ಸಿರಿ ಸಾಲೆತ್ತೂರಿನ ಐಝಾಝ್, ಬೆಥನಿ ಪುತ್ತೂರಿನ ರಿಯೊನ್ ಲಸ್ರಾದೊ, ಕೊಂಬೆಟ್ಟು ಶಾಲೆಯ ತೃಷ್ಯಾ ಹಾಗೂ ಲಿಪಿಕಾ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ರಾಜ್ಯಮಟ್ಟದ ಪಂದ್ಯಾಟಗಳು ಬೆಂಗಳೂರು, ಬಾಗಲಕೋಟೆ ಹಾಗೂ ಯಾದಗಿರಿಯಲ್ಲಿ ನಡೆಯಲಿವೆ.ಒಂದೇ ವರ್ಷದಲ್ಲಿ ಜೂಡೋ ಹಾಗೂ ಕರಾಟೆ ಎರಡರಲ್ಲೂ ಪ್ರಥಮ ಸ್ಥಾನಹಂಶಿಕಾ ಹಾಗೂ ಸಾನಿಧ್ಯ ಅವರು ಒಂದೇ ವರ್ಷದಲ್ಲಿ ಜೂಡೋ ಮತ್ತು ಕರಾಟೆ ಎರಡೂ ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವುದು ವಿಶೇಷ ಸಾಧನೆಯಾಗಿದೆ.

ವಿದ್ಯಾರ್ಥಿಗಳಿಗೆ ಮಾಧವ ಅಳಿಕೆ ಅವರ ಮಾರ್ಗದರ್ಶನದಲ್ಲಿ ರೋಹಿತ್ ಎಸ್.ಎನ್., ನಿಖಿಲ್ ಕೆ.ಟಿ., ತನುಶ್ರೀ ಡಿ. ಬಂಗೇರ, ಸುಧೀನ್ ಆಚಾರ್ ಹಾಗೂ ಭವಿಶ್ ಸಿಂಹಮೂಲೆ ತರಬೇತಿ ನೀಡುತ್ತಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಶಿಕ್ಷಕರು, ಪೋಷಕರು ಹಾಗೂ ಕ್ರೀಡಾಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.

- Advertisement -

Related news

error: Content is protected !!