Friday, September 11, 2026
spot_imgspot_img
spot_imgspot_img

ಸಾವಯವ ರಸ ಗೊಬ್ಬರ ಹೆಸರಿನಲ್ಲಿ ಕೃಷಿಕರಿಗೆ ನವಭಾರತ್ ಫರ್ಟಿಲೈಸರ್ಸ್ ಸಂಸ್ಥೆಯಿಂದ ವಂಚನೆ

- Advertisement -
- Advertisement -

ವಿಜಯ ಗ್ರೋಮಿನ್ ರಸ ಗೊಬ್ಬರದಲ್ಲಿ ಕ್ರೆಶರ್ ಹುಡಿ ಮಿಶ್ರಣ- ಗ್ರಾಹಕರ ಆಕ್ರೋಶ

ವಿಟ್ಲ: ಸಾವಯವ ರಸ ಗೊಬ್ಬರ ಹೆಸರಿನಲ್ಲಿ ಕ್ರೆಶರ್ ಹುಡಿ ಮಿಶ್ರಿತ ನಕಲಿ ಗೊಬ್ಬರ ಮಾರಾಟವಾಗಿರುವ ಬಗ್ಗೆ ಕೃಷಿಕರೊಬ್ಬರು ಮಾಹಿತಿ ನೀಡಿದ್ದಾರೆ.

ಹಾಸನದ ನವಭಾರತ್ ಫರ್ಟಿಲೈಸರ್ಸ್ LLP ಎಂಬ ಸಂಸ್ಥೆಯು ವಿಜಯ ಗ್ರೋಮಿನ್ ಎಂಬ ಸಾವಯವ ರಸ ಗೊಬ್ಬರದ ಪ್ಯಾಕೆಟ್ ಕರಾವಳಿ ಜಿಲ್ಲೆಯಾದ್ಯಂತ ಮಾರಾಟವಾಗುತ್ತಿದ್ದು, ಅನೇಕ ಕೃಷಿಕರು ಖರೀದಿಸಿರುತ್ತಾರೆ.

ಕೀಟ ನಾಶಕ, ಬೆಳೆಯ ಫಲವತ್ತತೆಗಾಗಿ ಈ ಗೊಬ್ಬರವನ್ನು ಕೃಷಿಕರು ಖರೀದಿಸಿದ್ದು, ಆದರೆ ಗೊಬ್ಬರದಲ್ಲಿ ಕ್ರೇಶರ್ ಹುಡಿ ಮಿಶ್ರಣ ಕಂಡು ಬಂದಿದ್ದು ಈ ಬಗ್ಗೆ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಿಯಾಯಿತಿ ದರದಲ್ಲಿ ಈ ರಸ ಗೊಬ್ಬರವನ್ನು ಮಾರಾಟ ಮಾಡಲಾಗುತ್ತಿದ್ದು, ಹೆಚ್ಚಿನ ಕೃಷಿಕರು ಖರೀದಿಸಿದ್ದಾರೆ. ಖರೀದಿಸಿದ ಗ್ರಾಹಕರೆಲ್ಲರೂ ವಂಚನೆಗೆ ಒಳಗಾಗಿದ್ದು, ಈ ಬಗ್ಗೆ ಕೃಷಿಕರಾದ ಮಾಂಕು ಮೂಲ್ಯ ಮದಕ ರವರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

- Advertisement -

Related news

error: Content is protected !!