ವರದಿ: ನ್ಯೂಸ್ ಡೆಸ್ಕ್, ವಿ ಟಿವಿ
ಗುವಾಹಟಿ: ಅಸ್ಸಾಂನಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಪ್ರವಾಹ ಉಂಟಾಗಿದೆ. ಹೀಗಾಗಿ ವರುಣನ ರೌದ್ರ ನರ್ತನಕ್ಕೆ 61 ಮಂದಿ ಪ್ರಾಣ ಕಳೆದುಕೊಂಡಿದ್ದು, 45,40,890 ಮಂದಿ ಪ್ರವಾಹದ ಸಂಕಷ್ಟದಲ್ಲಿದ್ದಾರೆ ಎಂದು ಅಸ್ಸಾಂ ಸ್ಟೇಟ್ ಮ್ಯಾನೇಜ್ಮೆಂಟ್ ಅಥಾರಿಟಿ ಮಾಹಿತಿ ನೀಡಿದೆ.
ಪ್ರವಾಹದ ಸಂಕಷ್ಟದಲ್ಲಿ 30 ಜಿಲ್ಲೆಗಳು..!
ಸುಮಾರು 30 ಜಿಲ್ಲೆ ಗಳಿಗೆ ಪ್ರವಾಹದ ಸುಳಿಯಲ್ಲಿ ಸಿಲುಕಿದ್ದು, ಜನರು ಆತಂಕದಲ್ಲಿ ಕಾಲಕಳೆಯುತ್ತಿದ್ದಾರೆ. ಈಗಾಗಲೇ 4,627 ಗ್ರಾಮಗಳು ಮುಳುಗಡೆಯಾಗಿದೆ. ಇದುವರೆಗೆ 426 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, 1.84 ಲಕ್ಷ ಮಂದಿ ನಿರಾಶ್ರಿತರು ಆಶ್ರಯ ಪಡೆಯುತ್ತಿದ್ದಾರೆ.
ಮಗುವನ್ನು ರಕ್ಷಿಸಿದ ಶಾಸಕ ಮೃಣಾಲ್ ಸೈಕಿಯಾ
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಿಕ್ಕಿಬಿದ್ದ ಜನರು ಮತ್ತು ಜಾನುವಾರುಗಳನ್ನು ರಕ್ಷಿಸಲು ಸ್ವತಃ ಅಸ್ಸಾಂ ಶಾಸಕ ಮೃಣಾಲ್ ಸೈಕಿಯಾ ಕಾರ್ಯಚರಣೆಗಿಳಿದಿದ್ದಾರೆ. ಪುಣಾನಿ ಮಗುವನ್ನು ನೀರು ತುಂಬಿ ಪ್ರದೇಶದಿಂದ ರಕ್ಷಿಸಿ ಫೋಟೋ ಭಾರೀ ವೈರಲ್ ಆಗುತ್ತಿದೆ.
ಪ್ರವಾಹದ ಸುಳಿಯಲ್ಲಿ ಮೂಕ ಪ್ರಾಣಿಗಳು
ಇನ್ನು ಮೂಕ ಪ್ರಾಣಿಗಳ ರೋಧನೆ ಹೇಳತೀರದು. ಬ್ರಹ್ಮಪುತ್ರ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದು,ನದಿ ತಟದಲ್ಲಿ ವಾಸಿಸುತ್ತಿರುವ ಪ್ರಾಣಿಗಳಿಗೆ ಪ್ರವಾಹದ ಸಂಕಷ್ಟದಲ್ಲಿದ್ದಾರೆ. ಕಝಿರಂಗ ನ್ಯಾಷನಲ್ ಪಾರ್ಕ್ ನಲ್ಲಿರುವ ಪ್ರಾಣಿಗಳು ಸಹ ಕಷ್ಟಕ್ಕೆ ಸಿಲುಕಿದೆ. ಈ ವರೆಗೆ ಒಟ್ಟು 170 ಪ್ರಾಣಿಗಳನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.