Saturday, September 12, 2026
spot_imgspot_img
spot_imgspot_img

ವಿಟ್ಲ: ದ.ಕ. ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಬಂಟ್ವಾಳ ಹಾಗೂ ಪಿಎಂ ಶ್ರೀ ಕರ್ನಾಟಕ ಪಬ್ಲಿಕ್ ಸ್ಕೂಲ್ ವಿಟ್ಲ(RMSA) ಸಹಯೋಗದಲ್ಲಿ ಬಂಟ್ವಾಳ ತಾಲೂಕು ಮಟ್ಟದ 14ರ ವಯೋಮಿತಿ ಬಾಲಕ-ಬಾಲಕಿಯರ ಕಬಡ್ಡಿ ಪಂದ್ಯಾಟ

- Advertisement -
- Advertisement -

ಬಾಲಕರಲ್ಲಿ ಕಲ್ಲಡ್ಕ ಶ್ರೀರಾಮ, ಬಾಲಕಿಯರಲ್ಲಿ ವಿಟ್ಲ RMSA ಪ್ರಥಮ

ವಿಟ್ಲ: ಕರ್ನಾಟಕ ಸರ್ಕಾರ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಂಟ್ವಾಳ ಹಾಗೂ ಪಿ.ಎಂ.ಶ್ರೀ ಕರ್ನಾಟಕ ಪಬ್ಲಿಕ್ ಸ್ಕೂಲ್ ವಿಟ್ಲ (RMSA) ಇದರ ಸಹಯೋಗದೊಂದಿಗೆ ಬಂಟ್ವಾಳ ತಾಲೂಕು ಮಟ್ಟದ 14 ವರ್ಷ ವಯೋಮಿತಿಯ ಬಾಲಕ-ಬಾಲಕಿಯರ ಕಬಡ್ಡಿ ಪಂದ್ಯಾಟವು ವಿಟ್ಲ ಪಿ.ಎಂ.ಶ್ರೀ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ನಡೆಯಿತು.

ಈ ಪಂದ್ಯಾಟದಲ್ಲಿ ಬಾಲಕರ ವಿಭಾಗದಲ್ಲಿ
ಪ್ರಥಮ – ಶ್ರೀರಾಮ ಹೈಸ್ಕೂಲ್ ಕಲ್ಲಡ್ಕ
ದ್ವಿತೀಯ – ಆರ್.ಎಂ.ಎಸ್.ಎ ವಿಟ್ಲ

ಬಾಲಕಿಯರ ವಿಭಾಗದಲ್ಲಿ
ಪ್ರಥಮ – ಆರ್.ಎಂ.ಎಸ್.ಎ ವಿಟ್ಲ
ದ್ವಿತೀಯ – ನಾರಾಯಣ ಗುರು ಶಾಲೆ ಪೂಂಜಾಲಕಟ್ಟೆ ಇವರು ಪ್ರಶಸ್ತಿ ಪಡೆದುಕೊಂಡರು.

ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಿಟ್ಲ ಆರ್.ಎಂ.ಎಸ್.ಎ ಶಾಲೆಯ ಪ್ರಾಥಮಿಕ ವಿಭಾಗದ ಎಸ್.ಡಿ.ಎಂ.ಸಿ ಅಧ್ಯಕ್ಷ ರವಿಶಂಕರ್ ಶಾಸ್ತ್ರಿ ವಹಿಸಿದ್ದರು.

ವೇದಿಕೆಯಲ್ಲಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಮಾನಾಥ ವಿಟ್ಲ, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಆಶಾ ನಾಯಕ್, ಪೊಲೀಸ್ ಅಧಿಕಾರಿ ವಿನಯ್, ಕಿರಣ್ ಕುಮಾರ್ ಬ್ರಹ್ಮಾವರ, ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ವಿಶಾಲಾಕ್ಷಿ ಅಮೀನ್, ರಜಿತ್ ಆಳ್ವ, ಹಸೈನಾರ್ ತಾಳಿತ್ತನೋಜಿ, ಅಶೋಕ ಅನಿಲಕಟ್ಟೆ, ಶ್ರೀನಿವಾಸ ಗೌಡ, ರಾಜೇಂದ್ರ ರೈ, ರವಿವರ್ಮ, ಬಿಂದು, ಹೈಸ್ಕೂಲ್ ಮುಖ್ಯ ಶಿಕ್ಷಕಿ ಫೆಲ್ಸಿಟಾ ಇವಾ ಗಲ್ಬಾವೊ, ಎಸ್.ಡಿ.ಎಂ.ಸಿ ಅಧ್ಯಕ್ಷ ಪ್ರವೀಣ್, ಶ್ವೇತಾ, ವಿದ್ಯಾಶಂಕರ್, ರಾಜೇಶ್, ದಯಾನಂದ, ಶೋಕ್ ಭಟ್, ಇಂದುಶೇಖರ್, ಸೇಸಪ್ಪ ಗೌಡ, ನವೀನ್ ಮತ್ತಿತರರು ಉಪಸ್ಥಿತರಿದ್ದರು.

ಆರ್.ಎಂ.ಎಸ್.ಎ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ವಾರಿಜ ಬಿ.ಎ ಸ್ವಾಗತಿಸಿ, ಸಹಶಿಕ್ಷಕಿ ಶ್ರೀಮತಿ ವಂದಿಸಿದರು. ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!