Friday, September 18, 2026
spot_imgspot_img
spot_imgspot_img

ಮಂಗಳೂರು:ತುಳುವಿಗೆ ರಾಜ್ಯದ 2ನೇ ಅಧಿಕೃತ ಭಾಷಾ ಸ್ಥಾನಮಾನ -ಮುಖ್ಯಮಂತ್ರಿಗಳಿಗೆ ಅಖಿಲ ಭಾರತ ತುಳು ಒಕ್ಕೂಟದಿಂದ ಅಭಿನಂದನೆ

- Advertisement -
- Advertisement -

ಮಂಗಳೂರು: ತುಳು ಭಾಷೆಯನ್ನು ಕರ್ನಾಟಕ ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಘೋಷಣೆ ಮಾಡಿ ವಿಶೇಷ ಮಾನ್ಯತೆ ನೀಡಿರುವುದು ಚಾರಿತ್ರಿಕ ನಿರ್ಧಾರವಾಗಿದ್ದು, ಈ ಘೋಷಣೆ ಮಾಡಿದ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಹಾರ್ದಿಕವಾಗಿ ಅಭಿನಂದಿಸುತ್ತೇವೆ ಎಂದು ಅಖಿಲ ಭಾರತ ತುಳು ಒಕ್ಕೂಟ (ರಿ.) ಮಂಗಳೂರು ಅಧ್ಯಕ್ಷ ಎ.ಸಿ. ಭಂಡಾರಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ತುಳು ಭಾಷೆ, ಸಂಸ್ಕೃತಿಯ ಉಳಿವು, ಬೆಳವಣಿಗೆಗಾಗಿ ಕಳೆದ ಎರಡೂವರೆ ದಶಕಗಳಿಂದ ‘ತುಳು ಕೂಟ’ ಹಾಗೂ ಮೂರುವರೆ ದಶಕಗಳಿಂದ ಅಖಿಲ ಭಾರತ ತುಳು ಒಕ್ಕೂಟವು ಕಾರ್ಯನಿರ್ವಹಿಸುತ್ತಿದೆ. ಬಷ್ರೈನ್, ಮಂಗಳೂರು, ಅಡ್ಯಾರ್ ಮೊದಲಾದ ಕಡೆಗಳಲ್ಲಿ ತುಳು ಸಮ್ಮೇಳನಗಳನ್ನು ಆಯೋಜಿಸಿರುವ, ಅಬ್ರಾರ್‌ನಲ್ಲಿ ವಿಶ್ವ ತುಳುವೆರೆ ಪರ್ಬ, ದುಬೈಯಲ್ಲಿ ವಿಶ್ವ ತುಳು ಸಮ್ಮೇಳನಗಳನ್ನು ಸಂಘಟಿಸಿರುವ ಅಖಿಲ ಭಾರತ ತುಳು ಒಕ್ಕೂಟವು ಹಲವಾರು ವರ್ಷಗಳಿಂದ ತುಳು ಭಾಷಾ ಮಾನ್ಯತೆಯ ಬಗ್ಗೆ ಹೋರಾಟ ಮಾಡುತ್ತಿದೆ. ಡಾ. ಎಂ. ಮೋಹನ ಆಳ್ವ ವರದಿ ಸಿದ್ಧತೆಗೆ ಪೂರ್ಣ ಸಹಕಾರ ನೀಡಿ, ವರದಿ ಅನುಷ್ಠಾನದ ಬಗ್ಗೆ ನಿರಂತರ ಪ್ರಯತ್ನ ಮಾಡಿದೆ ಎಂದಿದ್ದಾರೆ.

ಮಂಗಳೂರಿನಲ್ಲಿ ನಡೆಯುವ ರಾಜ್ಯ ಸಂಪುಟ ಸಭೆಯಲ್ಲಿ ತುಳು ಭಾಷೆಯನ್ನು ಕರ್ನಾಟಕದ ಅಧಿಕೃತ ಹೆಚ್ಚುವರಿ ಭಾಷೆ ಎಂಬುದಾಗಿ ಘೋಷಣೆ ಮಾಡಬೇಕು ಎನ್ನುವ ನಮ್ಮ ಮನವಿಯನ್ನು ಸನ್ಮಾನ್ಯ ಮುಖ್ಯಮಂತ್ರಿಗಳಿಗೆ, ಕನ್ನಡ ಸಂಸ್ಕೃತಿ ಸಚಿವರಿಗೆ ತಲುಪಿಸಿ ಇಂದು ಘೋಷಣೆಯಾಗಲು ಕಾರಣಕರ್ತರಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಫರೀದ್, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹಾಗೂ ಪ್ರತ್ಯಕ್ಷ, ಪರೋಕ್ಷ ಸಹಕಾರ ನೀಡಿರುವ ಶಾಸಕರಿಗೆ, ಜನನಾಯಕರಿಗೆ ಸಮಸ್ತ ತುಳುವರ ಪರವಾಗಿ ಹಾರ್ದಿಕ ಅಭಿನಂದನೆ ಹಾಗೂ ಕೃತಜ್ಞತೆಗಳನ್ನು ಒಕ್ಕೂಟದ ಪರವಾಗಿ ಸಮರ್ಪಿಸುತ್ತಿದ್ದೇವೆ ಎಂದು ಅಧ್ಯಕ್ಷ ಎ.ಸಿ. ಭಂಡಾರಿ, ಗೌರವಾಧ್ಯಕ್ಷ ಶಶಿಧರ ಶೆಟ್ಟಿ ಬರೋಡ, ಕಾರ್ಯದರ್ಶಿ ಪಿ.ಎ. ಪೂಜಾರಿ, ಕೋಶಾಧಿಕಾರಿ ವಿಜಯಲಕ್ಷ್ಮಿ ಬಿ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ ಶೆಟ್ಟಿ, ಉಪಾಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದ್ದಾರೆ.

- Advertisement -

Related news

error: Content is protected !!