



ನವದೆಹಲಿ: ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ‘ಪಾಸ್‌ಪೋರ್ಟ್‌ಗಳ(ತಿದ್ದುಪಡಿ) ನಿಯಮಗಳು, 2026’ ಅನ್ನು ಅಧಿಕೃತವಾಗಿ ಪ್ರಕಟಿಸಿದ್ದು, ಮಕ್ಕಳ ಪಾಸ್‌ಪೋರ್ಟ್ ಮಾನ್ಯತೆಯ ಅವಧಿ ಹಾಗೂ ಅರ್ಜಿ ಶುಲ್ಕದ ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳನ್ನು ತಂದಿದೆ.
5 ವರ್ಷದೊಳಗಿನ ಮಕ್ಕಳಿಗೆ ನೀಡಲಾಗುವ 36 ಪುಟಗಳ ಸಾಮಾನ್ಯ ಪಾಸ್‌ಪೋರ್ಟ್, ವಿತರಿಸಿದ ದಿನಾಂಕದಿಂದ 5 ವರ್ಷಗಳವರೆಗೆ ಅಥವಾ ಆ ಮಗುವಿಗೆ 18 ವರ್ಷ ತುಂಬುವವರೆಗೆ(ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ) ಮಾತ್ರ ಮಾನ್ಯವಾಗಿರುತ್ತದೆ. ನಿಯಮ 8(1)ರ ತಿದ್ದುಪಡಿಗಳ ಅನ್ವಯ, ಎಲ್ಲಾ ಬಗೆಯ ಅರ್ಜಿ ಶುಲ್ಕಗಳು 1980ರ ಪಾಸ್‌ಪೋರ್ಟ್ ನಿಯಮಗಳ ಶೆಡ್ಯೂಲ್ IVರಲ್ಲಿ ನಮೂದಿಸಲಾದ ಪರಿಷ್ಕೃತ ದರಗಳ ಪ್ರಕಾರವೇ ಇರಬೇಕಾಗುತ್ತದೆ.
ಹೊಸ ಪಾಸ್‌ಪೋರ್ಟ್, ನವೀಕರಣ (ರಿನೀವಲ್), ತತ್ಕಾಲ್, ಕಳೆದುಹೋದ/ಹಾಳಾದ ಪಾಸ್‌ಪೋರ್ಟ್ ಬದಲಿ ಹಾಗೂ ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರ (PCC) ಸೇರಿದಂತೆ ಎಲ್ಲಾ ಸೇವೆಗಳ ಶುಲ್ಕವನ್ನು ಪರಿಷ್ಕರಿಸಲಾಗಿದೆ.
ಪರಿಷ್ಕೃತ ಶುಲ್ಕದ ವಿವರ ಹೀಗಿದೆ:ವಯಸ್ಕರಿಗೆ36 ಪುಟಗಳ ಸಾಮಾನ್ಯ ಪಾಸ್‌ಪೋರ್ಟ್ ಶುಲ್ಕ: 1,500 ರೂ. ನಿಂದ 2,500 ರೂ.ಗೆ ಏರಿಕೆ
60 ಪುಟಗಳ ಸಾಮಾನ್ಯ ಪಾಸ್‌ಪೋರ್ಟ್ ಶುಲ್ಕ: 2,000 ರೂ. ನಿಂದ 3,500 ರೂ.ಗೆ ಏರಿಕೆತತ್ಕಾಲ್
36 ಪುಟಗಳ ತತ್ಕಾಲ್ ಪಾಸ್‌ಪೋರ್ಟ್: 3,500 ರೂ. ರಿಂದ 5,000 ರೂ.ಗೆ ಏರಿಕೆ
60 ಪುಟಗಳ ತತ್ಕಾಲ್ ಪಾಸ್‌ಪೋರ್ಟ್: 4,000 ರೂ. ನಿಂದ 6,000 ರೂ.ಗೆ ಏರಿಕೆ
ಕಳೆದುಹೋದ/ಹಾಳಾದ 60 ಪುಟಗಳ ಪಾಸ್‌ಪೋರ್ಟ್ ತತ್ಕಾಲ್ ಬದಲಿ ಶುಲ್ಕ: 5,500 ರೂ. ನಿಂದ 8,500 ರೂ.ಗೆ ಏರಿಕೆಅಪ್ರಾಪ್ತರಿಗೆ36 ಪುಟಗಳ ಹೊಸ ಅಥವಾ ಮರು-ವಿತರಣಾ ಪಾಸ್‌ಪೋರ್ಟ್ ಶುಲ್ಕ: 1,000 ರೂ.ನಿಂದ 1,750 ರೂ.ಗೆ ಏರಿಕೆ
ತತ್ಕಾಲ್ ಶುಲ್ಕ: 3,000 ರೂ. ನಿಗದಿಪಡಿಸಲಾಗಿದೆ.
8 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಹಾಗೂ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮೊದಲ ಬಾರಿಗೆ (ಹೊಸ ಅರ್ಜಿ) ಸಲ್ಲಿಸುವ ಪಾಸ್‌ಪೋರ್ಟ್‌ಗಳಿಗೆ ಶೇ. 10ರಷ್ಟು ಶುಲ್ಕ ರಿಯಾಯಿತಿ ಮುಂದುವರಿಯಲಿದೆ. ಆದರೆ ಈ ರಿಯಾಯಿತಿಯು ಪಾಸ್‌ಪೋರ್ಟ್ ಮರು-ವಿತರಣೆ ಪ್ರಕರಣಗಳಿಗೆ ಅನ್ವಯಿಸುವುದಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿರುವುದಾಗಿ ತಿಳಿದುಬಂದಿದೆ.








