Friday, September 18, 2026
spot_imgspot_img
spot_imgspot_img

ಪುತ್ತೂರು: ಮನೆಯಂಗಳದಲ್ಲಿ ಯುವಕನ ಮೃತದೇಹ ಪತ್ತೆ; ವಿದ್ಯುತ್ ಅವಘಡ ಶಂಕೆ

- Advertisement -
- Advertisement -

ಪುತ್ತೂರು: ಸೆ.18ರಂದು ಕೆಮ್ಮಾಯಿ ಬಡಾವು ಎಂಬಲ್ಲಿ ಯುವಕನೋರ್ವ ಮನೆಯಂಗಳದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ನಡೆದಿದೆ.ಮೃತರನ್ನು ಬಡಾವು ನಿವಾಸಿ, ಮೆಡಿಕಲ್‌ನಲ್ಲಿ ಉದ್ಯೋಗಿಯಾಗಿದ್ದ ರಕ್ಷಿತ್ (29) ಎಂದು ಗುರುತಿಸಲಾಗಿದೆ.

ರಕ್ಷಿತ್ ಅವರು ಮನೆಯಲ್ಲಿ ವಾಹನ ತೊಳೆಯುತ್ತಿದ್ದ ವೇಳೆ ವಿದ್ಯುತ್ ಅವಘಡ ಸಂಭವಿಸಿ ಮೃತಪಟ್ಟಿರಬಹುದು ಎಂದು ಮೇಲ್ನೋಟಕ್ಕೆ ಶಂಕಿಸಲಾಗಿದೆ. ಮನೆಯವರು ಹೊರಗಡೆ ತೆರಳಿದ್ದ ಸಂದರ್ಭದಲ್ಲಿ ಘಟನೆ ನಡೆದಿದ್ದು, ಸ್ವಲ್ಪ ತಡವಾಗಿ ಬೆಳಕಿಗೆ ಬಂದಿದೆ.ಮನೆಯಂಗಳದಲ್ಲಿ ರಕ್ಷಿತ್ ಬಿದ್ದಿರುವುದನ್ನು ಗಮನಿಸಿದ ನೆರೆಯವರು ಕೂಡಲೇ ಇತರರ ಸಹಾಯದಿಂದ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಆದರೆ, ಅದಾಗಲೇ ಅವರು ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.ಮೃತದೇಹವನ್ನು ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.ಮೃತರು ತಂದೆ, ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ.

- Advertisement -

Related news

error: Content is protected !!