- Advertisement -
- Advertisement -




ಬೆಂಗಳೂರು: ಎಲ್‌ಪಿಜಿ ಸಿಲಿಂಡರ್ ಬಳಕೆದಾರರಿಗೆ ಅಕ್ಟೋಬರ್ 01 ರಿಂದ ಗ್ಯಾಸ್ ಬುಕ್ಕಿಂಗ್ ಮಾಡಲು ಆಧಾರ್ ಇ-ಕೆವೈಸಿ ಮಾಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಒಂದು ವೇಳೆ ಗ್ರಾಹಕರು ಆಧಾರ್ ಇ-ಕೆವೈಸಿ ಮಾಡಿಸದಿದ್ದರೆ ಗ್ಯಾಸ್ ಬುಕ್ ಮಾಡಲು ಸಾಧ್ಯವಾಗುವುದಿಲ್ಲ. ಅಲ್ಲದೆ, ಆಧಾರ್ ಬಯೋಮೆಟ್ರಿಕ್ ಪ್ರಕ್ರಿಯೆ ಪೂರ್ಣಗೊಳ್ಳದಿದ್ದರೆ ಸಬ್ಸಿಡಿ ದರದಲ್ಲಿ ಎಲ್‌ಪಿಜಿ ಸಿಲಿಂಡರ್ ಲಭ್ಯವಿರುವುದಿಲ್ಲ.
ದೇಶದಲ್ಲಿ ಇದುವರೆಗೂ 27.43 ಕೋಟಿ ಗ್ರಾಹಕರು ಮಾತ್ರ ಆಧಾರ್ ಇ-ಕೆವೈಸಿ ಮಾಡಿಸಿದ್ದು, ಇನ್ನು 3.16 ಕೋಟಿ ಜನರು ಇ-ಕೆವೈಸಿ ಮಾಡಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಅನುಕೂಲ ಮಾಡಿಕೊಡಲು ತೈಲ ಕಂಪನಿಗಳು ಪ್ರಮುಖ ಆಯ್ಕೆಗಳನ್ನು ನೀಡಿವೆ.
- ಮನೆಗೆ ಸಿಲಿಂಡರ್ ಡೆಲಿವರಿ ಮಾಡಲು ಬರುವ ವ್ಯಕ್ತಿಯ ಮೊಬೈಲ್ ಆ್ಯಪ್‌ನಲ್ಲಿ ಬೆರಳಚ್ಚು(ಬಯೋಮೆಟ್ರಿಕ್) ನೀಡುವ ಮೂಲಕ ಇ-ಕೆವೈಸಿ ಪ್ರಕ್ರಿಯೆಯನ್ನು ಸುಲಭವಾಗಿ ಮುಗಿಸಬಹುದು.
- ಗ್ರಾಹಕರು ತಮ್ಮ ಹತ್ತಿರದ ಗ್ಯಾಸ್ ಏಜೆನ್ಸಿ ಬಳಿಗೆ ನೇರವಾಗಿ ತೆರಳಿ ಆಧಾರ್ ಇ-ಕೆವೈಸಿ ಮಾಡಿಸಬಹುದು.
- ಗ್ರಾಹಕರು ತಮ್ಮ ಮೊಬೈಲ್ ಆ್ಯಪ್‌ಗಳ ಮೂಲಕ ಮನೆಯಲ್ಲೇ ಕುಳಿತು ಸ್ವತಃ ಇ-ಕೆವೈಸಿ ಮಾಡಿಕೊಳ್ಳಬಹುದು. ಇಂಡಿಯನ್ ಆಯಿಲ್ ಬಳಕೆದಾರರು ‘ಇಂಡಿಯನ್ ಆಯಿಲ್ ಒನ್’ , ಭಾರತ್ ಗ್ಯಾಸ್ ಬಳಕೆದಾರರು ‘ಹಲೋ ಬಿಪಿಸಿಎಲ್’ ಮತ್ತು ಹೆಚ್‌ಪಿ ಬಳಕೆದಾರರು ‘ಹೆಚ್ ಪಿ ಪೇ’ ಆ್ಯಪ್ ಮೂಲಕ ಸೆಲ್ಫ್ ಇ-ಕೆವೈಸಿ ಮಾಡಿಕೊಳ್ಳಲು ಅವಕಾಶವಿದೆ
- ಒಂದು ವೇಳೆ ಸಬ್ಸಿಡಿ ದರದಲ್ಲಿ ಗ್ಯಾಸ್ ಬೇಡವೆಂದಾದಲ್ಲಿ, ತಮಗೆ ಮೊಬೈಲ್ ಆ್ಯಪ್ ಬಯೋಮೆಟ್ರಿಕ್ ಮಾಡಿಸುವುದು ಅಗತ್ಯವಿಲ್ಲ ಎಂದು ಗ್ರಾಹಕರು ಘೋಷಿಸಬೇಕು.ಮಾರುಕಟ್ಟೆ ದರ ಅನ್ವಯ: ಬಯೋಮೆಟ್ರಿಕ್ ನೀಡದ ಗ್ರಾಹಕರು ಸಬ್ಸಿಡಿ ರಹಿತವಾಗಿ, ಮಾರುಕಟ್ಟೆ ದರದಲ್ಲೇ ಗ್ಯಾಸ್ ಸಿಲಿಂಡರ್ ಪಡೆಯಬೇಕಾಗುತ್ತದೆ ಎಂದು ತಿಳಿದುಬಂದಿದೆ.
- Advertisement -








