Wednesday, September 23, 2026
spot_imgspot_img
spot_imgspot_img

ವಿಟ್ಲ ಪಟ್ಟಣ ಪಂಚಾಯತ್ ವತಿಯಿಂದ ಪೌರಕಾರ್ಮಿಕರ ದಿನಾಚರಣೆ

- Advertisement -
- Advertisement -

ವಿಟ್ಲ: ಸೆ.23 ಬುಧವಾರದಂದು ವಿಟ್ಲ ಪಟ್ಟಣ ಪಂಚಾಯಿತಿಯ ವತಿಯಿಂದ ಪೌರಕಾರ್ಮಿಕರ ದಿನಾಚರಣೆಯನ್ನು ಬ್ರಹ್ಮಶ್ರೀ ಸಭಾಭವನ ವಿಟ್ಲದಲ್ಲಿ ಆಚರಿಸಲಾಯಿತು.

ಸಭಾಧ್ಯಕ್ಷತೆ ವಹಿಸಿದ್ದ ಪಟ್ಟಣ ಪಂಚಾಯಿತಿಯ ಅಧ್ಯಕ್ಷರಾದ ಶ್ರೀ ಕರುಣಾಕರ ನಾಯ್ತೊಟ್ಟುರವರು ವಿಟ್ಲ ಪಟ್ಟಣದ ಸ್ವಚ್ಚತೆಯಲ್ಲಿ ಪೌರಕಾರ್ಮಿಕರ ಮತ್ತು ಚಾಲಕರ ಕೊಡುಗೆಯ ಬಗ್ಗೆ ಸಭೆಗೆ ವಿವರಿಸಿ ಇನ್ನು ಮುಂದೆಯೂ ಸಹಕಾರ ಕೋರಿದರು.

ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶ್ರೀ ಅಶೋಕ್ ಕೂಮಾರ್ ಶೆಟ್ಟಿಯವರು ಮಾತನಾಡುತ್ತಾ ಪೌರಕಾರ್ಮಿಕರು ದುಶ್ಚಟದಿಂದ ದೂರ ಇರುವಂತೆ ತಿಳಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಾಧ್ಯಾಪಕರು ಹಾಗೂ ತರಬೇತುದಾರರಾದ ಡಾ.ರಾಜೇಶ್ ಬಿಜ್ಜಂಗಳ ರವರು ಸ್ವಚ್ಛತೆಯಲ್ಲಿ ಪೌರಕಾರ್ಮಿಕರ ಮಹತ್ವ, ತ್ಯಾಜ್ಯವನ್ನು ಸಂಪನ್ಮೂಲವಾಗಿ ಪರಿವರ್ತಿಸುವ ವಿಧಾನ ಹಾಗೂ ಅವರು ತ್ಯಾಜ್ಯ ನಿರ್ವಹಣೆಯಲ್ಲಿ ಕೈಗೊಂಡ ಸಾಹಸಗಾಥೆಯನ್ನು ಸಭೆಯಲ್ಲಿ ವಿವರಿಸಿದರು.

ಮುಖ್ಯಾಧಿಕಾರಿ ಕರುಣಾಕರ ವಿ ರವರು ಮಾತನಾಡಿ ಪೌರಕಾರ್ಮಿಕರಿಂದ ಪಟ್ಟಣಕ್ಕೆ ಆಗುವ ಪ್ರಯೋಜನಗಳ ಬಗ್ಗೆ ತಿಳಿಸಿದರು.
ವೇದಿಕೆಯಲ್ಲಿ ಪಟ್ಟಣ ಪಂಚಾಯಿತಿಯ ಸದಸ್ಯರಾದ ರವಿಪ್ರಕಾಶ್, ವಸಂತ, ಅಶ್ರಫ್,ಅಬ್ದುಲ್ ರಹಿಮಾನ್,ರಕ್ಷಿತಾ, ವಿಜಯಲಕ್ಷ್ಮಿ, ಪದ್ಮಿನಿ,ಶ್ರೀನಿವಾಸ ಶೆಟ್ಟಿ, ಹರೀಶ್ ಉಪಸ್ಥಿತರಿದ್ದು ಶುಭಹಾರೈಸಿದರು.

ಪೌರಕಾರ್ಮಿಕರಾದ ಸದಾಶಿವ ಮತ್ತು ಹನುಮಂತರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಪೌರಕಾರ್ಮಿಕರ ದಿನಾಚರಣೆಯ ಅಂಗವಾಗಿ ಏರ್ಪಡಿಸಲಾಗಿದ್ದ ಆಟೋಟ ಸ್ಪರ್ದೆಯ ವಿಜೇತರಿಗೆ ವೇದಿಕೆಯಲ್ಲಿದ್ದ ಅತಿಥಿಗಳು ಬಹುಮಾನ ವಿತರಿಸಿ ಪೌರಕಾರ್ಮಿಕರು ಮತ್ತು ಚಾಲಕರಿಗೆ ಸನ್ಮಾನಿಸಿದರು. ಕರವಸೂಲಿಗಾರರಾದ ಚಂದ್ರಶೇಖರ ವರ್ಮ ರವರು ಸ್ವಾಗತಿಸಿ ವಂದಿಸಿದರು.

ಪೌರಕಾರ್ಮಿಕರಾದ ಪೂವಪ್ಪರವರು ಕಾರ್ಯಕ್ರಮ ನಿರೂಪಣೆ ಮಾಡಿದರು. ಲೋಕೇಶ್ ಮತ್ತು ಲ್ಯಾನ್ಸಿ ಬ್ರಿಯಾನ್ ರವರು ಆಟೋಟ ಸ್ಪರ್ದೆಯ ಬಹುಮಾನ ವಿತರಣೆಗೆ ಸಹಕರಿಸಿದರು. ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿಯ ಎಲ್ಲಾ ಪೌರಕಾರ್ಮಿಕರು,ಚಾಲಕರು, ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. ಕಾರ್ಯಕ್ರಮ ಪ್ರಾರಂಭವಾಗುವ ಮೊದಲು ಎಲ್ಲಾ ಪೌರಕಾರ್ಮಿಕರು, ಚಾಲಕರು, ಸಿಬ್ಬಂದಿಗಳು ಹಾಗೂ ಸದಸ್ಯರಿಗೆ ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ ಆರೋಗ್ಯ ತಪಾಸಣೆ ಮಾಡಲಾಯಿತು.

- Advertisement -

Related news

error: Content is protected !!