- Advertisement -
- Advertisement -
ಮಾಜಿ ಸಂಸದ ಪ್ರತಾಪ್ ಸಿಂಹ ಭಾಗಿ!



ಬಂಟ್ವಾಳ: ಕೊಳತ್ತಮಜಲು ಅಬ್ದುಲ್ ರಹಮಾನ್ ಕೊಲೆ ಪ್ರಕರಣದ ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆ ಜಾರಿಗೊಳಿಸಿರುವುದನ್ನು ಖಂಡಿಸಿ ಸೆಪ್ಟೆಂಬರ್ 28ರಂದು ಬಿ.ಸಿ.ರೋಡಿನಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ದ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಭರತ್ ಕುಮ್ದೇಲು , ಶಿವಪ್ರಸಾದ್, ಪ್ರದೀಪ್, ಅಭಿನವ್ ರೈ, ತೇಜಾಕ್ಷ ಹಾಗೂ ರಂಜಿತ್ ವಿರುದ್ಧ ಪೊಲೀಸರು ಗೂಂಡಾ ಕಾಯ್ದೆ ಜಾರಿಗೊಳಿಸಿರುವ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಲು ಸಿದ್ಧತೆ ನಡೆದಿದೆ. ಈ ಪ್ರತಿಭಟನೆಗೆ ಮತ್ತಷ್ಟು ಬಲ ತುಂಬಲು ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಸೆಪ್ಟೆಂಬರ್ 28ರಂದು ಬಿ.ಸಿ.ರೋಡಿಗೆ ಆಗಮಿಸಿ ಪ್ರಮುಖ ಭಾಷಣಗಾರರಾಗಿ ಭಾಗವಹಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಬೆಳವಣಿಗೆಯ ನಡುವೆ ಕೊಳತ್ತಮಜಲು ಪ್ರಕರಣವು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಸೆ.28ರ ಪ್ರತಿಭಟನೆಗೆ ಇದೀಗ ಮತ್ತಷ್ಟು ಮಹತ್ವ ಸಿಕ್ಕಿದೆ.
- Advertisement -








