
ಪುತ್ತೂರು: ಪರವಾನಿಗೆ ನಿಯಮ ಉಲ್ಲಂಘಿಸಿ ಪಿಕಪ್ ವಾಹನದಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದುದನ್ನು ಪುತ್ತೂರು ಗ್ರಾಮಾಂತರ ಪೊಲೀಸರು ಪತ್ತೆ ಮಾಡಿ ಚಾಲಕ, ಮಾಲಕ ಸಹಿತ ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಸೆ.22ರಂದು ಪಡುವನ್ನೂರು ಗ್ರಾಮದ ಪದಡ್ಕ ಎಂಬಲ್ಲಿಂದ ಅಕ್ರಮವಾಗಿ ಪಿಕಪ್ ವಾಹನದಲ್ಲಿ ದನ ಸಾಗಾಟ ಮಾಡುತ್ತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ಪದಡ್ಕ ಜಂಕ್ಷನ್‌ನಿಂದ ಸ್ವಲ್ಪ ದೂರ ಪಿಕಪ್ ವಾಹನವನ್ನು ಬೆನ್ನಟ್ಟಿ ನಿಲ್ಲಿಸಿ ಪರಿಶೀಲಿಸಿದಾಗ ಗೋಸಾಗಾಟಕ್ಕೆ ಪರವಾನಿಗೆ ಮತ್ತು ಪಶು ವೈದ್ಯಾಧಿಕಾರಿಯವರ ಪ್ರಮಾಣ ಪತ್ರ ಇಲ್ಲದಿರುವುದು ಬೆಳಕಿಗೆ ಬಂದಿದೆ.
ಘಟನೆ ಕುರಿತು ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ವಾಹನ ಚಾಲನೆ ಮಾಡಿದ ಹಾಗು ಪರವಾನಿಗೆ ಮತ್ತು ಪಶು ವೈದ್ಯಾಧಿಕಾರಿಯವರ ಪ್ರಮಾಣ ಪತ್ರ ಇಲ್ಲದಿರುವ ಹಿನ್ನೆಲೆಯಲ್ಲಿ ಪಿಕಪ್ ಚಾಲಕ ಕುಂಟಾರು ಅಡೂರು ಮಿಂಚಿಪದವು ಸೀತಾರಾಮ ಮಣಿಯಾಣಿ (540), ಮುಳ್ಳೇರಿಯ ಕುಂಟಾರು ಪೆರಿಕೊಚ್ಚಿ ನಿವಾಸಿ ಕೇಲು ಮಣಿಯಾಣಿ(70ವ) ಮತ್ತು ಪಿಕಪ್ ವಾಹನ (ಕೆ.ಎಲ್ 14 ಎಲ್ 540)ದ ಮಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.








